ಅಮೆರಿಕದ ಜನಪ್ರತಿನಿಧಿ ಮಾರಿಸ್ ಜಾಕ್ಸನ್ ’ಮೋ’ ಬ್ರೂಕ್ಸ್ ಜೂನಿಯರ್‌ಗೆ ಯಾಕೋ ಟೈಂ ಸರಿಯಿಲ್ಲವೆಂದು ತೋರುತ್ತದೆ. ಅಮೆರಿಕ ರಾಜಧಾನಿಯಲ್ಲಿ ನಡೆದ ದಂಗೆ ಸಂಬಂಧ ತಮ್ಮ ಮೇಲೆ ನ್ಯಾಯಾಂಗ ತನಿಖೆ ಎದುರಿಸುತ್ತಿರುವ ಅಲಬಾಮಾದ ಪ್ರತಿನಿಧಿ ಮಾರಿಸ್ ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.
ಕ್ಯಾಲಿಫೋರ್ನಿಯಾದ ಡೆಮಾಕ್ರಾಟ್ ಪ್ರತಿನಿಧಿ ಎರಿಕ್ ಸ್ವಾಲ್ವೆಲ್‌ರ ವಕೀಲರೊಂದಿಗೆ ಸಂವಹನ ನಡೆಸುತ್ತಿದ್ದ ಸಂದರ್ಭ, ಮಾರಿಸ್ ಅಕಸ್ಮಾತ್ ಆಗಿ ತಮ್ಮ ಜಿಮೇಲ್ ಖಾತೆಯ ಪಿನ್ ಹಾಗೂ ಪಾಸ್‌ವರ್ಡ್‌ಗಳನ್ನು ತೋರಿಸಿಬಿಟ್ಟಿದ್ದಾರೆ. ಆ ವೇಳೆ ಅವರ ಲ್ಯಾಪ್ಟಾಪ್ ಸ್ಕ್ರೀನ್ ಟೇಪ್ ಆಗುತ್ತಿತ್ತು.
ತಮ್ಮ ರಾಜಕೀಯ ವೈರಿ ಸ್ವಾಲ್ವೆಲ್ ವಿರುದ್ಧ ಟ್ವೀಟ್ ಸಮರದಲ್ಲಿ ಬ್ಯುಸಿಯಾಗಿದ್ದ ವೇಳೆ ಮಾರಿಸ್ ಹೀಗೆ ತಮ್ಮ ಸ್ಕ್ರೀನ್ ಅನ್ನು ಬಹಿರಂಗಪಡಿಸಿದ್ದಾರೆ. ಆ ವೇಳೆ ಅವರ ಪಿನ್ ಹಾಗೂ ಪಾಸ್‌ವರ್ಡ್‌ಗಳು ಬಹಿರಂಗಗೊಂಡಿವೆ.
ಮರದಿಂದ ತಯಾರಾಗಿದೆ ಐಷಾರಾಮಿ ಕಾರು….!
ಸಶಸ್ತ್ರ ಪಡೆಗಳ ಸೈಬರ್ ಆವಿಷ್ಕಾರಿ ತಂತ್ರಜ್ಞಾನ ಹಾಗೂ ಮಾಹಿತಿ ವ್ಯವಸ್ಥೆಗಳ ಉಪಸಮಿತಿಯಲ್ಲಿರುವ ಮಾರಿಸ್ ಅವರೇ ಹೀಗೆ ತಮ್ಮ ಡೇಟಾ ಭದ್ರತೆಯ ವಿಚಾರದಲ್ಲಿ ಯಾಮಾರುವುದು ಎಂದರೆ ಹೇಗೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ವರ್ಷಾರಂಭದಲ್ಲಿ ಅಮೆರಿಕದಲ್ಲಿ ನಡೆದ ಗಲಭೆಗಳಿಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೊನಾಲ್ಡ್ ಟ್ರಂಪ್ ಜೂನಿಯರ್ ಹಾಗೂ ರೂಡಿ ಗುಲಿಯಾನಿ ಮುಖ್ಯ ಕಾರಣರೆಂದು ಆರೋಪಿಸಿ, ಅವರ ವಿರುದ್ಧ ಸ್ವಾಲ್ವೆಲ್ ನ್ಯಾಯಾಂಗ ಹೋರಾಟ ನಡೆಸುತ್ತಿದ್ದಾರೆ.