ಇಸ್ರೇಲಿ ಪ್ರಜೆಯೊಬ್ಬರು ಆಕಸ್ಮಿಕವಾಗಿ ಕ್ಯಾಬ್ನಲ್ಲಿ ಬಿಟ್ಟುಹೋಗಿದ್ದ ವೈದ್ಯಕೀಯ ಸಾಧನವನ್ನು ಪಡೆಯಲು ಹೋಗಿ 49 ಸಾವಿರ ರೂ. ಕಳೆದುಕೊಂಡಿದ್ದರು. ಕಳೆದುಕೊಂಡಿದ್ದ ಹಣ ಸೇರಿದಂತೆ ವೈದ್ಯಕೀಯ ಸಾಧನವನ್ನ ಮುಂಬೈನ ದಹಿಸರ್ ಪೊಲೀಸರು ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಕಾರ, ದೂರುದಾರರಾದ ಎಸ್ತರ್ ಡೇನಿಯಲ್ ಬೆಂಜಮಿನ್, ತನ್ನ ಪತಿ, ಸಹೋದರಿ ಸೀಮಾ ಸ್ಯಾಮ್ಸನ್ ಮತ್ತು ಆಕೆಯ ಸೋದರ ಮಾವ ನಾರ್ಮನ್ ಸ್ಯಾಮ್ಸನ್ ಅವರೊಂದಿಗೆ ಪನ್ವೆಲ್ನಲ್ಲಿ ವಾಸಿಸುತ್ತಿದ್ದರು. ನಾಲ್ವರು ತಮ್ಮ ಕುಟುಂಬವನ್ನು ಭೇಟಿ ಮಾಡಲು ಇಸ್ರೇಲ್ನಿಂದ ಬಂದಿದ್ದರು. ನಿವೃತ್ತ ಸೇನಾ ಅಧಿಕಾರಿ ನಾರ್ಮನ್ ಅವರು ನಿದ್ರೆಯಲ್ಲಿ ಉಸಿರುಗಟ್ಟುವಿಕೆಯಿಂದ ಬಳಲುತ್ತಿರುವ ಕಾರಣ ಧನಾತ್ಮಕ ವಾಯುಮಾರ್ಗ ಒತ್ತಡ (CPAP) ಯಂತ್ರವನ್ನು ಬಳಸುತ್ತಾರೆ. ಗುರುವಾರ ಸಂಜೆ ಅವರು ಸಂಬಂಧಿಕರನ್ನು ಭೇಟಿ ಮಾಡಲು ಕ್ಯಾಬ್ ಮೂಲಕ ಬೋರಿವಲಿ ಪೂರ್ವಕ್ಕೆ ಪ್ರಯಾಣಿಸಿದ್ದರು. ಆದ್ರೆ ಅವರು ಕ್ಯಾಬ್ ನಲ್ಲಿ CPAP ಯಂತ್ರವನ್ನು ಮರೆತು ಬಿಟ್ಟು ಹೋಗಿದ್ದರು.
ಆಗ ಎಸ್ತರ್ ಗೂಗಲ್ ನಲ್ಲಿ ಪತ್ತೆಯಾದ ಓಲಾ ಹೆಲ್ಪ್ ಲೈನ್ ನಂಬರ್ ಗೆ ಕಾಲ್ ಮಾಡಿದ್ದಾರೆ. ಕರೆ ಮಾಡಿದಾಗ, ಇನ್ನೊಂದು ತುದಿಯಲ್ಲಿದ್ದ ವ್ಯಕ್ತಿ ಗೂಗಲ್ ಪೇ ಮೂಲಕ 5 ರೂಪಾಯಿ ಮಾಡುವಂತೆ ಕೇಳಿದ್ದಾರೆ. ತಕ್ಷಣವೇ ಹಣವನ್ನು ವರ್ಗಾಯಿಸಿದ ಎಸ್ತರ್ ಖಾತೆಯಿಂದ 49,000 ರೂ.ಗಳನ್ನು ಕಡಿತಗೊಳಿಸಲಾಗಿತ್ತು. ಈ ಆಘಾತಕಾರಿ ವಿಷಯ ತಿಳಿದ ಅವರು ಪೊಲೀಸರನ್ನ ಸಂಪರ್ಕಿಸಿ ಸಹಾಯ ಕೇಳಿದ್ದಾರೆ.
ದಹಿಸರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಪ್ರವೀಣ್ ಪಾಟೀಲ್, “ದೂರು ಸ್ವೀಕರಿಸಿದ ನಂತರ ನಾವು ತಂಡವನ್ನು ರಚಿಸಿದ್ದೆವು. ನಾವು ಘಟನೆಯ ಬಗ್ಗೆ ಬ್ಯಾಂಕ್ಗೆ ತಿಳಿಸಿ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿದೆವು. ಮೊತ್ತವನ್ನು Amazon Pay ಖಾತೆಗೆ ವರ್ಗಾಯಿಸಲಾಗಿದೆ ಎಂದು ನಮಗೆ ತಿಳಿದಾಗ ತಕ್ಷಣ Amazon Pay ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿ, ವಂಚಕರ ಖಾತೆಯನ್ನು ಸ್ಥಗಿತಗೊಳಿಸಿದ್ದೇವೆ ಮತ್ತು Amazon ಸಹಾಯದಿಂದ ಮಹಿಳೆಯ ಖಾತೆಗೆ ಹಣವನ್ನು ವರ್ಗಾಯಿಸಿದ್ದೇವೆ ಎಂದರು.
ನಂತರ ಕ್ಯಾಬ್ ಕಂಪನಿಯನ್ನು ಸಂಪರ್ಕಿಸಿ ವಾಹನ ಮತ್ತು ಚಾಲಕನ ಸಂಖ್ಯೆಯನ್ನು ಅಂತಿಮವಾಗಿ ಅಂಧೇರಿಯಲ್ಲಿ ಪತ್ತೆಹಚ್ಚಿ ಸಿಪಿಎಪಿ ಯಂತ್ರವನ್ನು ವಶಪಡಿಸಿಕೊಂಡಿದ್ದೇವೆ. ಅದನ್ನು ದೂರುದಾರರಿಗೆ ಹಿಂತಿರುಗಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣ ಮತ್ತು ವೈದ್ಯಕೀಯ ಸಾಧನ ಹಿಂಪಡೆದ ಕುಟುಂಬವು ಶುಕ್ರವಾರ ತಮ್ಮ ದೇಶಕ್ಕೆ ಮರಳಿದೆ.
ದೂರುದಾರರು ದೂರು ದಾಖಲಿಸಲು ನಿರಾಕರಿಸಿದ್ದರಿಂದ ವಂಚನೆಗೆ ಸಂಬಂಧಿಸಿದಂತೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.