
ಎಂಎನ್ಎಸ್ ಪಾರ್ಟಿಯ ಕಾರ್ಯಕರ್ತ ಥಾಣೆಯಲ್ಲಿ ಕಾಯ್ದಿರಿಸಿದ್ದ ಫ್ಲಾಟ್‌ಗಳಲ್ಲಿ ಅಕ್ರಮ ಪಾರ್ಕಿಂಗ್ ಬಗ್ಗೆ ವಾದ ವಿವಾದಗಳು ನಡೆದು ಕೊನೆಗೆ ಹಲ್ಲೆಯವರೆಗೂ ಮುಂದುವರೆದಿದೆ. ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಲ್ಹಾಸ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಕಾರ್ಯಕರ್ತನ ಹೆಸರು ಯೋಗಿರಾಜ್ ದೇಶ್‌ಮುಖ್ ಎಂದು ಗುರುತಿಸಲಾಗಿದ್ದು, ಹಲವು ವರ್ಷಗಳಿಂದಲೂ ಈ ಪ್ರದೇಶದಲ್ಲಿ ಭೂ ಮಾಫಿಯಾ ಅತಿಯಾಗಿದ್ದು, ಆಗಾಗ ಗಲಾಟೆಗಳು ನಡೆಯುತ್ತಲೇ ಇದ್ದವು. ಅಕ್ರಮವಾಗಿ ಭೂಮಿ ಕಬಳಿಸಿ ನಿವೇಶನದ ವಿಷಯದ ಕುರಿತು ತಹಸೀಲ್ದಾರ್ ಕಚೇರಿ ಮತ್ತು ಉಲ್ಹಾಸ್ ನಗರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅವರು ಯಾವುದೇ ಕ್ರಮವನ್ನ ಕೈಗೊಳ್ಳಲಾಗಿಲ್ಲ. ಅಲ್ಲದೇ ಅವರು ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಅಲ್ಲಿ ಕಾಯ್ದಿರಿಸಿದ ನಿವೇಶನಗಳಲ್ಲಿ, ಕೆಲವರು ವಾಹನ ನಿಲುಗಡೆಗೂ ಮುಂದಾಗಿದ್ದಾರೆ. ಅದೇ ವೇಳೆಯಲ್ಲಿ ಗಲಾಟೆ ನಡೆದಿದೆ.
ಯೋಗಿರಾಜ್ ದೇಶ್‌ಮುಖ್ ಅವರ ಮೇಲೆ ಹಲ್ಲೆ ಮಾಡಿದವರು ಅಮಿತ್ ಫಂಡೆ, ಆಟೋ ರಿಕ್ಷಾ ಚಾಲಕ ಅಕ್ಷಯ್ ಅಂಧಾಳೆ ಮತ್ತು ಅಪರಿಚಿತ ವ್ಯಕ್ತಿಯೊಬ್ಬರು, ಕೋಲಿನಿಂದ ದೇಶಮುಖ ಮೇಲೆ ಹಲ್ಲೆ ಮಾಡಿದರು ಎಂದು ಹೇಳಲಾಗುತ್ತಿದೆ. ಈ ಹಿಂದೆ ಎಂಎನ್‌ಎಸ್ ನಾಯಕ ಸಂದೀಪ್ ದೇಶಪಾಂಡೆಯ ಅವರ ಮೇಲೂ ದಾಳಿ ನಡೆದಿತ್ತು.
ಎಂಎನ್‌ಎಸ್ ಕಾರ್ಯಕರ್ತರು ಈಗ ಪ್ರತಿಭಟನೆಗೆ ಮುಂದಾಗಿದ್ದು, ಪದೇ ಪದೇ ಹಲ್ಲೆ ಆಗುತ್ತಿರುವುದನ್ನ ಖಂಡಿಸಿದ್ದಾರೆ. ಅಧಿಕಾರಿಗಳು ಸಹ ಭೂ ಮಾಫಿಯಾಗಳ ಜೊತೆಗೆ ಕೈ ಜೋಡಿಸಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.