ಥಾಣೆ: ಅತ್ತೆಯ ಮನೆಯಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕದ್ದು ನೆರೆಮನೆಯ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದ ಸೊಸೆಯೊಬ್ಬಳು ಆರು ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ.
2017ರಲ್ಲಿ ಒಟ್ಟು 15.46 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ಕದ್ದು ಈಕೆ ಪರಾರಿಯಾಗಿದ್ದಳು. 55 ತೊಲ ಚಿನ್ನ ಮತ್ತು ಹಣವನ್ನು ತೆಗೆದುಕೊಂಡು ಓಡಿ ಹೋಗಿರುವುದಾಗಿ ಸೊಸೆಯ ವಿರುದ್ಧ ಅತ್ತೆ ದೂರು ದಾಖಲಿಸಿದ್ದರು. ಇಷ್ಟು ವರ್ಷಗಳ ಹುಡುಕಾಟದ ಬಳಿಕ ಸೊಸೆ ಮತ್ತು ಆಕೆಯ ಪ್ರಿಯಕರ ಸಿಕ್ಕಿ ಬಿದ್ದಿದ್ದಾರೆ.
ಆರೋಪಿಗಳು ತಮ್ಮ ಹೆಸರನ್ನು ಬದಲಾಯಿಸಿಕೊಂಡು, ಹೊಸ ಹೆಸರುಗಳಲ್ಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕದ ಗೋಕರ್ಣ ಸೇರಿದಂತೆ ಗೋವಾದಿಂದ ಮಹಾರಾಷ್ಟ್ರದ ಕೊಂಕಣ ಬೆಲ್ಟ್‌ನ ಚಿಪ್ಲುನ್ ಮತ್ತು ಇತರ ಪ್ರದೇಶಗಳಿಗೆ ತೆರಳುವ ಮೂಲಕ ಪೊಲೀಸರಿಂದ ತಪ್ಪಿಸಿಕೊಂಡಿದ್ದರು ಎಂದು ಹಿರಿಯ ಇನ್ಸ್‌ಪೆಕ್ಟರ್ ಆನಂದ್ ರಾವ್ರಾಣೆ ಮಾಹಿತಿ ನೀಡಿದ್ದಾರೆ.