ಥಾಣೆ: ಹೂಡಿಕೆದಾರರಿಗೆ 7.6 ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ ಆರೋಪದ ನಂತರ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸ್ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದ ಅಪರೂಪದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಸುಳಿವಿನ ಆಧಾರದ ಮೇಲೆ ಸಂದೀಪ್ ಝುಂಬರ್ ಲಾಲ್ ಪೋಖ್ರಾನಾ ಅವರನ್ನು ಸೋಮವಾರ ಪುಣೆಯಲ್ಲಿ ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಪೋಖ್ರಾನಾ ತನ್ನ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ, ಲಾಭದಾಯಕ ಆದಾಯ ಭರವಸೆ ನೀಡುವ ಮೂಲಕ 13,900 ಜನರನ್ನು ವಂಚಿಸಿದ್ದಾನೆ. ಸಂಸ್ಥೆಯಲ್ಲಿ ಆರ್ಥಿಕವಾಗಿ ಲಾಭದಾಯಕವಲ್ಲದ ಯೋಜನೆಯನ್ನು ನಿರ್ವಹಿಸುತ್ತಿದ್ದ ಅವರು ಅದರ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ಪ್ರಕಟಣೆಗಳನ್ನು ನೀಡಿದ್ದರು.
ಹೂಡಿಕೆದಾರರು 7.64 ಕೋಟಿ ರೂ.ಗಳಷ್ಟು ವಂಚನೆಗೊಳಗಾಗಿದ್ದಾರೆ ಮತ್ತು ಯುಪಿಸಿ, ಆರ್ ಬಿ ಐ ಕಾಯಿದೆ, ಬಹುಮಾನ ಮತ್ತು ಚಿಟ್ ಫಂಡ್ ಹಣ ಚಲಾವಣೆ ಯೋಜನೆ (ನಿಷೇಧ) ಕಾಯಿದೆ, ಎಂಪಿಐಡಿ ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ 2010ರಲ್ಲಿ ಮಹಾತ್ಮ ಫುಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.