
ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಪೊವೈ-ವಿಹಾರ್ ಸರೋವರಗಳ ಸುತ್ತಲೂ ಸೈಕಲ್ ಟ್ರ್ಯಾಕ್ ಬಗ್ಗೆ ಯೋಜಿಸಿರುವ ಬಿಎಂಸಿ ವಿರುದ್ಧ ನಾಲ್ವರು ನವವಿವಾಹಿತರು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಮದುವೆಯ ದಿನದಂದು ಈ ಜೋಡಿಗಳು ಪೊವೈ-ವಿಹಾರ್ ಸರೋವರಗಳು ಮತ್ತು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ (SGNP) ಉಳಿಸಲು ಕರೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದರು. ಒಂದು ಫಲಕದಲ್ಲಿ ವಿಹಾರ್ ಕೆರೆಯನ್ನು ಉಳಿಸಿ ಎಂದು ಬರೆದಿದ್ದರೆ, ಇನ್ನೊಂದು ಫಲಕದಲ್ಲಿ ನಮ್ಮ ಭವಿಷ್ಯವು ಅಪಾಯದಲ್ಲಿದೆ, ದಯವಿಟ್ಟು ನಮ್ಮ ಪೊವೈ ಕೆರೆಯನ್ನು ಕದಿಯಬೇಡಿ ಎಂದು ಬರೆಯಲಾಗಿದೆ. ಸೈಕಲ್ ಟ್ರ್ಯಾಕ್ ಕೇವಲ ನೆಪ ಮಾತ್ರ, ಕಾಡು ಕಣ್ಮರೆಯಾಗುವುದು ಈ ಯೋಜನೆ ನಿಜವಾದ ಉದ್ದೇಶ ಎಂದು ವರದಿಯಾಗಿದೆ.
ಇನ್ನು ಮುಂಬೈ ಪಾಲಿಕೆಯ 10 ಕಿ.ಮೀ. ಸೈಕಲ್ ಟ್ರ್ಯಾಕ್ ಯೋಜನೆಗೆ ನಾಗರಿಕರು ಮತ್ತು ಪರಿಸರವಾದಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಪೊವೈ-ವಿಹಾರ್ ಸರೋವರಗಳ ಗಡಿಯಲ್ಲಿ ಸೈಕ್ಲಿಂಗ್ ಟ್ರ್ಯಾಕ್ ಮಾಡುವ ಬಿಎಂಸಿಯ ಪ್ರಸ್ತಾವನೆಯು ತನ್ನದೇ ಆದ ಅಭಿವೃದ್ಧಿ ನಿಯಂತ್ರಣ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್
ಪೊವೈ ಸರೋವರದ ಗಡಿಯಲ್ಲಿ ಸೈಕಲ್ ಟ್ರ್ಯಾಕ್ ಅನ್ನು ನಿರ್ಮಿಸದಂತೆ ಬಿಎಂಸಿಯ ಯೋಜನೆಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ-ಬಿ) ಇಬ್ಬರು ಸಂಶೋಧಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ಯೋಜನೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಪರಿಸರ ಸಚಿವ ಆದಿತ್ಯ ಠಾಕ್ರೆ, ಯೋಜನೆಯು ನೈಸರ್ಗಿಕ, ನಗರ ಮುಕ್ತ ಜಾಗವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.