ಮಹಾರಾಷ್ಟ್ರದ ಥಾಣೆಯಲ್ಲಿ ಕಟ್ಟಡದ ಟೆರೇಸ್ ಮೇಲೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ 20 ವರ್ಷದ ಯುವಕನ ವಿರುದ್ಧ ಶಾಂತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಭಿವಂಡಿ ನಿವಾಸಿ ಮೊಹಮ್ಮದ್ ರಾಯನ್ ಸಿದ್ದಿಕಿ (20) ಎಂದು ಗುರುತಿಸಲಾಗಿದೆ.
ಆರೋಪಿ ವಿರುದ್ದ ಗುರುವಾರದಂದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 79 ಮತ್ತು 329 (2) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಆರೋಪಿ ಕಟ್ಟಡಕ್ಕೆ ನುಗ್ಗಿ ಟೆರೇಸ್‌ಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪ್ಯಾಂಟ್ ಜಿಪ್ ಬಿಚ್ಚಿ ಟೆರೇಸ್ ಮೇಲೆ ಒಣಗಿಸಲು ಇಟ್ಟಿದ್ದ ಬಟ್ಟೆಯ ಮೇಲೆ ಹಸ್ತಮೈಥುನ ಮಾಡಿಕೊಂಡಿದ್ದ.
ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಆರೋಪಿಯ ಕೃತ್ಯ ಸೆರೆಯಾಗಿದ್ದು, ಇದನ್ನು ನೋಡಿದ ಮಹಿಳಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ದೂರುದಾರೆ ಇತರೆ ಮಹಿಳೆಯರೊಂದಿಗೆ ಪೊಲೀಸ್ ಠಾಣೆಗೆ ಬಂದು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಶಾಂತಿನಗರ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸರ್ಜೆರಾವ್ ಪಾಟೀಲ್, “ದೂರುದಾರರು ಮತ್ತು ಇತರ ಮಹಿಳೆಯರು ನಮ್ಮನ್ನು ಸಂಪರ್ಕಿಸಿದಾಗ ಪ್ರಕರಣವನ್ನು ದಾಖಲಿಸಿದ್ದೇವೆ. ಅವನನ್ನು ಪತ್ತೆಹಚ್ಚಿ, ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮ್ಯಾಜಿಸ್ಟ್ರೇಟ್ ಕಸ್ಟಡಿಗೆ ಒಪ್ಪಿಸಲಾಗಿತ್ತು ಎಂದು ತಿಳಿಸಿದ್ದಾರೆ.