alex Certify ʼಬೀಸ್ಟ್ʼ ನಲ್ಲಿ ಫೈಟರ್ ಜೆಟ್ ಹಾರಿಸಿದ ದಳಪತಿ ವಿಜಯ್; ಅಸಮಾಧಾನ ಹೊರಹಾಕಿದ ನಿವೃತ್ತ ಪೈಲಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೀಸ್ಟ್ʼ ನಲ್ಲಿ ಫೈಟರ್ ಜೆಟ್ ಹಾರಿಸಿದ ದಳಪತಿ ವಿಜಯ್; ಅಸಮಾಧಾನ ಹೊರಹಾಕಿದ ನಿವೃತ್ತ ಪೈಲಟ್

Thalapathy Vijay flies a fighter jet in Beast. This pilot has 'so many  questions' - Trending News Newsದಳಪತಿ ವಿಜಯ್ ಅಭಿನಯದ ಬೀಸ್ಟ್‌ನ ಹಲಮಿತಿ ಹಬೀಬೋ ಹಾಡಿಗೆ ಬಹಳಷ್ಟು ಮಂದಿ ನೃತ್ಯ ಮಾಡಿದ್ದಾರೆ. ಪೂಜಾ ಹೆಗ್ಡೆ ನಟಿಸಿರುವ ತಮಿಳು ಚಿತ್ರದಲ್ಲಿ ವಿಜಯ್ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸಾಫೀಸ್ ನಲ್ಲಿ ಅಂತಹ ಸದ್ದು ಮಾಡದಿದ್ರೂ, ಚಿತ್ರದಲ್ಲಿ ವಿಜಯ್ ಫೈಟರ್ ಜೆಟ್ ಅನ್ನು ಹಾರಿಸಿರುವ ದೃಶ್ಯಕ್ಕೆ ನಿವೃತ್ತ ಪೈಲಟ್ ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಎಎಫ್‌ನ ನಿವೃತ್ತ ಪೈಲಟ್‌ ಒಬ್ಬರು ಸಿನಿಮಾದ ಹೊಡೆದಾಟದ ದೃಶ್ಯವೊಂದರಲ್ಲಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ. ನಿವೃತ್ತ ಗ್ರೂಪ್ ಕ್ಯಾಪ್ಟನ್ ಶಿವರಾಮನ್ ಸಜನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಜಯ್ ಯುದ್ಧ ವಿಮಾನವನ್ನು ಹಾರಿಸುತ್ತಿರುವುದನ್ನು ಮತ್ತು ಕೆಲವು ಗೂಂಡಾಗಳು ಮುಖಾಮುಖಿ ಡಿಕ್ಕಿಯಲ್ಲಿ ಸ್ಫೋಟಿಸುತ್ತಿರುವುದನ್ನು ಸಿನಿಮಾದ ದೃಶ್ಯವೊಂದರಲ್ಲಿ ನೋಡಬಹುದು. ತನಗೆ ತುಂಬಾ ಪ್ರಶ್ನೆಗಳಿವೆ ಎಂಬ ಸರಳ ಶೀರ್ಷಿಕೆಯೊಂದಿಗೆ ಸಜನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಹಲವಾರು ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳೊಂದಿಗೆ ವೈರಲ್ ಆಗಿದೆ. ಭಾರತೀಯ ಸಿನಿಮಾಗಳಲ್ಲಿ ನಾಯಕನನ್ನು ಸೂಪರ್ ಹೀರೋ ಎಂದು ಬಿಂಬಿಸುವುದು ಸಾಮಾನ್ಯವಾಗಿದೆ. ಈ ದೃಶ್ಯವು ಜನರನ್ನು ದಿಗ್ಭ್ರಮೆಗೊಳಿಸಿದೆ. ಈ ರೀತಿಯ ದೃಶ್ಯ ತೋರಿಸಿರುವಲ್ಲಿ ಬೀಸ್ಟ್ ಏನು ಪ್ರಥಮ ಸಿನಿಮಾವಲ್ಲ ಎಂದು ಹಲವರು ಬರೆದಿದ್ದಾರೆ.

ಬೀಸ್ಟ್ ಚಲನಚಿತ್ರವು ಏಪ್ರಿಲ್ 13 ರಂದು ಬಿಡುಗಡೆಯಾಯಿತು. ಈ ಸಿನಿಮಾವನ್ನು ವೀಕ್ಷಿಸಲು ಮೊದಲ ವಾರದಲ್ಲಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಮೊದಲ ವಾರದ ಅಂತ್ಯದ ವೇಳೆಗೆ ಕೆಜಿಎಫ್-2 ಘರ್ಜನೆಗೆ ಬೀಸ್ಟ್ ಕೊಚ್ಚಿಕೊಂಡು ಹೋಯಿತು.

— sajan (@sajaniaf) May 15, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...