alex Certify ಚಹಾ ಅಸ್ವಾದಿಸಿದ ಎಂ.ಎಸ್.‌ ಧೋನಿ; ಲಕ್ಷಾಂತರ ಮಂದಿಯಿಂದ ವಿಡಿಯೋ ವೀಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಹಾ ಅಸ್ವಾದಿಸಿದ ಎಂ.ಎಸ್.‌ ಧೋನಿ; ಲಕ್ಷಾಂತರ ಮಂದಿಯಿಂದ ವಿಡಿಯೋ ವೀಕ್ಷಣೆ

ಇಂಡಿಯನ್ ಪ್ರೀಮಿಯರ್ ಲೀಗ್ 2023ಕ್ಕೆ ಇಡೀ ದೇಶ ಕಾಯುತ್ತಿದೆ. 2008 ರ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆ ನಾಯಕತ್ವ ವಹಿಸಿರುವ ಎಂ.ಎಸ್.​ ಧೋನಿ ಕೂಡ IPL ನ ಇತ್ತೀಚಿನ ಆವೃತ್ತಿಗೆ ತಯಾರಿ ನಡೆಸುತ್ತಿದ್ದಾರೆ. ಅವರ ಅಭಿಮಾನಿಗಳು ಇತ್ತೀಚೆಗೆ ಲೆಜೆಂಡರಿ ಆಟಗಾರನ ತೆರೆಮರೆಯ ಕ್ಷಣದ ವಿಡಿಯೋ ಸೆರೆಹಿಡಿದಿದ್ದು ಅದೀಗ ವೈರಲ್​ ಆಗಿದೆ.

ಸಿಎಸ್‌ಕೆಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ಸೆಷನ್‌ಗಾಗಿ ಸಜ್ಜಾಗುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ ಜನಮನವನ್ನು ಕದ್ದದ್ದು ಚಹಾದ ಮೇಲಿನ ಅವರ ಪ್ರೀತಿ.

ವೀಡಿಯೊದಲ್ಲಿ, ಧೋನಿ ಅವರು, ತಮ್ಮ ಸಿಎಸ್​ಕೆ ಜರ್ಸಿಯನ್ನು ಧರಿಸಿ, ಸ್ಥಳದ ಪ್ಯಾಂಟ್ರಿಯಂತೆ ಕಾಣುವ ಕಡೆಗೆ ಹೋಗುವುದನ್ನು ನೋಡಬಹುದು. ಸಿಬ್ಬಂದಿಯೊಬ್ಬರು ಅವರಿಗೆ ಒಂದು ಕಪ್ ಚಹಾವನ್ನು ಹಸ್ತಾಂತರಿಸುತ್ತಾರೆ, ಅದನ್ನು ಅವರು ಸಂತೋಷದಿಂದ ಸ್ವೀಕರಿಸುತ್ತಾರೆ. ಇದರ ವಿಡಿಯೋ ವೈರಲ್​ ಆಗಿದೆ. ಒಂದು ದಿನದೊಳಗೆ, ಈ ವಿಡಿಯೋ ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

https://www.youtube.com/watch?v=aQrb9dT-DFU

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...