ಬೆಂಗಳೂರು: ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಜೂನ್ 18 ರಂದು ಕುವೆಂಪು ಹೋರಾಟ ಸಮಿತಿ ಕರೆ ನೀಡಿರುವ ಪ್ರತಿಭಟನೆ ಜಾಥಾದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭಾಗವಹಿಸಲಿದ್ದಾರೆ.
ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿರುವ ಅವರು, ಮುಂದಿನ ಹೋರಾಟದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಪೂರ್ಣವಾಗಿಯೂ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ದೇವೇಗೌಡರು ರಾಜ್ಯಾದ್ಯಂತ ಜೂನ್ 18 ರಂದು ಬಸವೇಶ್ವರರು, ಅಂಬೇಡ್ಕರ್ ಸೇರಿದಂತೆ ಮಹನೀಯರ ಪಠ್ಯ ಪರಿಷ್ಕರಣೆ ಬಗ್ಗೆ ವಿವಾದ ಬಗೆಹರಿಸಬೇಕು ಎಂದು ಹೋರಾಟ ಕೈಗೊಳ್ಳಲಾಗಿದೆ. ಪರಿಷ್ಕರಿಸಲಾಗಿರುವ ಪಠ್ಯ ಪುಸ್ತಕಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
https://m.facebook.com/story.php?story_fbid=pfbid0SF2w98qmeUDApJwQLeCauXSgZoX4j41CAfhF847jzBuPme4mMaPWazZAjZ9k8KfDl&id=1050909186&sfnsn=wiwspwa