ಬೆಂಗಳೂರು: ಕೊರೋನಾ ಹಿನ್ನೆಲೆ ಶಾಲೆ ಆರಂಭ ವಿಳಂಬವಾದ ಕಾರಣ ಪ್ರಸಕ್ತ ಶೈಕ್ಷಣಿಕ ಸಾಲಿನಕಲ್ಲಿ ಪಠ್ಯವನ್ನು ಶಿಕ್ಷಣ ಇಲಾಖೆ ಕಡಿತ ಮಾಡಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಒಂದರಿಂದ ಹತ್ತನೇ ತರಗತಿ ಪಠ್ಯವನ್ನು ಕಡಿತ ಮಾಡಲಾಗಿದೆ. ಬೋಧನಾ ಅವಧಿಯನ್ನು 220 ಗಂಟೆಯಿಂದ 120 ಗಂಟೆಗೆ ಇಳಿಸಲಾಗಿದೆ. ಸೆಪ್ಟಂಬರ್ 1 ರಿಂದ ಮಾರ್ಚ್ 31 ಕ್ಕೆ ಅನ್ವಯವಾಗುವಂತೆ ಪ್ರತಿ ವಿಷಯದಲ್ಲೂ ಕೆಲವು ಪಠ್ಯವನ್ನು ಕಡಿತ ಮಾಡಲಾಗಿದ್ದು, ಕೆಲವು ಪ್ರಮುಖ ವಿಚಾರಗಳ ಬೋಧನೆಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.