ಬೆಂಗಳೂರು: ಕೊರೋನಾ ಕಾರಣದಿಂದಾಗಿ ಕಳೆದ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10 ನೇ ತರಗತಿಯ ಪಠ್ಯ ಕ್ರಮದಲ್ಲಿ ಶೇಕಡ 30ರಷ್ಟು ಕಡಿತಗೊಳಿಸಲಾಗಿತ್ತು. 5 ರಿಂದ 10 ನೇ ತರಗತಿಯ ಮಕ್ಕಳಿಗೆ ಆನ್ಲೈನ್ ಶಿಕ್ಷಣದೊಂದಿಗೆ ವಿದ್ಯಾಗಮ ಮತ್ತು ಚಂದನ ವಾಹಿನಿಯ ಮೂಲಕ ಪಾಠ ಬೋಧನೆ ಮಾಡಲಾಗಿತ್ತು.
ಈ ವರ್ಷ ಇನ್ನೂ ಶಾಲೆಗಳು ಆರಂಭವಾಗದ ಕಾರಣ ಎಲ್ಲಾ ವಿಷಯಗಳ ಪಠ್ಯಗಳನ್ನು ದೂರದರ್ಶನ ಚಂದನ ವಾಹಿನಿಯ ಮೂಲಕ ಬೋಧಿಸಲಾಗುತ್ತಿದೆ. ಈ ಸಾಲಿನಲ್ಲಿ ಕೂಡ ಶಾಲೆಗಳು ಆರಂಭವಾಗದಿರುವುದರಿಂದ ಪಠ್ಯ ಕಡಿತಗೊಳಿಸಲಾಗುತ್ತದೆ ಎಂಬ ಚರ್ಚೆಗಳು ನಡೆದಿವೆ. ಆದರೆ, ಪಠ್ಯ ಕಡಿತದ ಬಗ್ಗೆ ಸರ್ಕಾರ ಇನ್ನು ತೀರ್ಮಾನ ಕೈಗೊಂಡಿಲ್ಲ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕ ಎಂ.ಆರ್. ಮಾರುತಿ, ಪ್ರಸಕ್ತ ಸಾಲಿನಲ್ಲಿ ಒಂದರಿಂದ ಹತ್ತನೇ ತರಗತಿಯ ಪಠ್ಯಕ್ರಮ ಕಡಿತಗೊಳಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.