ಬೆಂಗಳೂರು: ಪರಿಷ್ಕೃತ ಶಾಲಾ ಪಠ್ಯ ಪುಸ್ತಕಗಳನ್ನು ತಿದ್ದುಪಡಿ ಮಾಡಿ ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಪರಿಷ್ಕೃತ ಅಧ್ಯಾಯಗಳ ಪ್ರತಿಯನ್ನು ಶೀಘ್ರದಲ್ಲೇ ಶಾಲೆಗಳಿಗೆ ಕಳುಹಿಸಲಾಗುವುದು.
ಕರ್ನಾಟಕ ಪಠ್ಯಪುಸ್ತಕ ಸಂಘದ ಪರಿಷ್ಕೃತ ಪ್ರತಿಯನ್ನು www.ktbs.kar.nic.in ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಪರಿಷ್ಕೃತ ಪ್ರತಿಯನ್ನು ಶಾಲಾ ಮುಖ್ಯಸ್ಥರು ಡೌನ್ಲೋಡ್ ಮಾಡಿಕೊಂಡು ಪಾಠ ಮಾಡಬಹುದು. ಮುದ್ರಣ ಕಾರ್ಯ ಪ್ರಗತಿಯಲ್ಲಿದ್ದು, ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ರಾಜ್ಯದ ಎಲ್ಲಾ ಶಾಲೆಗಳಿಗೆ ಮರು ಪರಿಷ್ಕೃತ ಪಠ್ಯ ಪೂರೈಕೆ ಮಾಡಲಾಗುವುದು.
ಪಠ್ಯ ಪುಸ್ತಕ ಮುದ್ರಣಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘ ಸುಮಾರು 200 ಕೋಟಿ ರೂ. ವೆಚ್ಚ ಮಾಡಿದೆ ಮರುಪರಿಷ್ಕೃತ ಪಠ್ಯಕ್ಕೆ ಸುಮಾರು 12 ಲಕ್ಷ ರೂ. ವೆಚ್ಚವಾಗಿದೆ ಎಂದು ಹೇಳಲಾಗಿದೆ.