ಬೆಂಗಳೂರು: ಕೊರೊನಾದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ವಿಳಂಬವಾಗಿ ಆರಂಭವಾದ ಕಾರಣ ಎಸ್ಎಸ್ಎಲ್ಸಿ ಪಠ್ಯದಲ್ಲಿ ಶೇಕಡ 20 ರಷ್ಟು ಕಡಿತ ಮಾಡಲಾಗಿದೆ. ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸರ್ಕಾರ ಪಠ್ಯ ಕಡಿತಗೊಳಿಸಲು ತೀರ್ಮಾನ ಕೈಗೊಂಡಿದ್ದು, ಅಧಿಕೃತ ಆದೇಶ ಹೊರಡಿಸಿದೆ. ಶಿಕ್ಷಕರು ಪಾಠ ಮಾಡಿರುವ ಪಠ್ಯ ಹೊರತುಪಡಿಸಿ ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಮಾಡಬೇಕಿರುವ ಪಠ್ಯದಗಳಲ್ಲಿ ಕಡಿತ ಮಾಡಲು ತಿಳಿಸಲಾಗಿದೆ.
ಪಠ್ಯ ಕಡಿತ ಮಾಡಿರುವ ಮಾಹಿತಿಯನ್ನು http;//desert.kar.nic.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ಶಿಕ್ಷಕರು ಇದರ ಪ್ರಕಾರ ಪಾಠ ಮಾಡುವಂತೆ ತಿಳಿಸಲಾಗಿದೆ.