alex Certify BIG BREAKING: ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರದ ಆದೇಶ

ಬೆಂಗಳೂರು: ಪಠ್ಯಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ವಿಷಯಗಳ ಬದಲಾವಣೆ ಮಾಡಲಾಗಿದ್ದು, ಪಠ್ಯದಿಂದ ಕೈ ಬಿಡುವ ಪಾಠಗಳ ಬಗ್ಗೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗಿದೆ.

ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠ ಕೈ ಬಿಡಲಾಗಿದೆ. ಸಮಾಜ ವಿಜ್ಞಾನದಲ್ಲಿ 9 ಪಾಠಗಳಿಗೆ ಕೊಕ್ ನೀಡಲಾಗಿದೆ. ನಿಜವಾದ ಆದರ್ಶ ಪುರುಷ ಯಾರಾಗಬೇಕು ಎನ್ನುವ ಪಠ್ಯವನ್ನು ಕೈ ಬಿಡಲಾಗಿದೆ. ಕೇಶವ ಬಲಿರಾಮ ಹೆಡ್ಗೇವಾರ್ ಬರೆದಿದ್ದ ಗದ್ಯವನ್ನು ಸರ್ಕಾರ ಕೈಬಿಟ್ಟಿದೆ.

ಚಕ್ರವರ್ತಿ ಸೂಲಿಬೆಲೆ ಅವರ ತಾಯಿ ಭಾರತೀಯ ಅಮರ ಪುತ್ರರು ಪಾಠಕ್ಕೆ ಕತ್ತರಿ ಹಾಕಲಾಗಿದೆ. ಶತಾವಧಾನಿ ಆರ್. ಗಣೇಶ್ ಗದ್ಯವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠಕ್ಕೆ ಸರ್ಕಾರದಿಂದ ಕೊಕ್ ನೀಡಲಾಗಿದೆ.

ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯ ಅವರ ಪಾಠವನ್ನು ಕೂಡ ಕೈ ಬಿಡಲಾಗಿದೆ. ಪಾರಂಪಳ್ಳಿ ನರಸಿಂಹ ಐತಾಳ, ಲಕ್ಷ್ಮೀಶ ಕೆ.ಟಿ. ಗಟ್ಟಿ, ಪಿ ಸತ್ಯನಾರಾಯಣ ಭಟ್ಟರ ಗದ್ಯಕ್ಕೂ ರಾಜ್ಯ ಸರ್ಕಾರ ಕತ್ತರಿ ಹಾಕಿದೆ.

ಸಾವಿತ್ರಿಬಾಯಿ ಪುಲೆ, ನೆಹರೂ, ಡಾ. ಅಂಬೇಡ್ಕರ್ ಅವರ ಪಠ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಸುಕುಮಾರಸ್ವಾಮಿ ಕುರಿತ ಪಠ್ಯ ಸೇರಿಸಲಾಗಿದೆ. ಸಾರಾ ಅಬೂಬಕ್ಕರ್, ವನಮಾಲ ರಂಗನಾಥ್ ಪಾಠಗಳನ್ನು ಸೇರ್ಪಡೆ ಮಾಡಲಾಗಿದೆ. ಮಹರ್ಷಿ ವಾಲ್ಮೀಕಿ, ಉರುಸ್ ಗಳಲ್ಲಿ ಭಾವೈಕ್ಯತೆ ಪಾಠವನ್ನು ಸೇರ್ಪಡೆ ಮಾಡಲಾಗಿದೆ.

ಸಮಾಜ ವಿಜ್ಞಾನ ಪಠ್ಯದಲ್ಲಿಯೂ ಹಲವು ಅಧ್ಯಾಯಗಳನ್ನು ಸರ್ಕಾರ ಸೇರ್ಪಡೆ ಮಾಡಿದೆ. ವೇದಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಕುರಿತ ಅಧ್ಯಾಯ, ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ, ಒಡೆಯರ್ ಪಾಠಗಳನ್ನು ಸೇರ್ಪಡೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...