ಬೆಂಗಳೂರು: ಆರನೇ ತರಗತಿ ಪಠ್ಯದಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ ಪಠ್ಯ ವಜಾಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಬ್ರಾಹ್ಮಣ ಸಮುದಾಯದ ಭಾವನೆ ಘಾಸಿಗೊಳಿಸುವ ಪಠ್ಯವನ್ನು ತಕ್ಷಣದಿಂದಲೇ ಕೈಬಿಡುವಂತೆ ಸಚಿವರು ಸೂಚನೆ ನೀಡಿದ್ದಾರೆ. ಬೇರೆ ತರಗತಿ ಪಠ್ಯಗಳಲ್ಲಿ ಇಂತಹ ವಿಷಯಗಳು ಇದ್ದರೆ ಪರಿಶೀಲಿಸಿ ತಜ್ಞರ ಸಮಿತಿ ರಚಿಸಿ 15 ದಿನಗಳಲ್ಲಿ ವರದಿ ಸಲ್ಲಿಕೆಗೆ ಪಠ್ಯಪುಸ್ತಕ ಸಂಘದ ಎಂಡಿಗೆ ನಿರ್ದೇಶನ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ, ಆಯುಕ್ತರಿಗೆ ಸೂಚನೆ ನೀಡಿದ್ದು ಸುತ್ತೋಲೆ ಹೊರಡಿಸಲು ತಿಳಿಸಲಾಗಿದೆ. ಮಂತ್ರಾಲಯ ಸ್ವಾಮೀಜಿ ಕರೆ ಮಾಡಿ ವಿಷಯ ಪ್ರಸ್ತಾಪಿಸಿ ಪ್ರಮಾದ ಸರಿಪಡಿಸಲು ತಿಳಿಸಿದ್ದು, ಇಂದೇ ಕ್ರಮವಹಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿನ್ನೆ ಮನವಿ ಸಲ್ಲಿಸಿದ್ದು, ತಕ್ಷಣ ಕ್ರಮಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದರು.