ಕಳೆದು ಹೋದ ವಸ್ತುಗಳು ಸಿಗಲು ಭಾರೀ ಅದೃಷ್ಟ ಬೇಕು. ಹೀಗೆ ವರ್ಷಗಳ ಹಿಂದೆ ಕಳೆದುಕೊಂಡ ವಸ್ತುಗಳು ಅವುಗಳ ಮಾಲೀಕರಿಗೆ ಸೇರಿರುವ ಅನೇಕ ನಿದರ್ಶನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ.
ಟೆಕ್ಸಾಸ್‌ನ ಡಲ್ಲಾಸ್ ನಾರ್ತ್ ಟೋಲ್‌ವೇ ಬಳಿ ಬಿಳಿ ಬಣ್ಣದ ಮದುವೆಯ ಡ್ರೆಸ್ ಒಂದು ಕಂಡು ಬಂದಿದೆ. ತ್ಯಾಜ್ಯದ ನಡುವೆ ಈ ಡ್ರೆಸ್ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕಂಡಿದೆ.
ಜೆಡಿಎಸ್ ಬಲಿಷ್ಠ: ಸಂಚಲನ ಮೂಡಿಸಿದ ಅನಂತಕುಮಾರ್ ಪುತ್ರಿ ಟ್ವೀಟ್
ಈ ಬಟ್ಟೆಯ ಮಾಲೀಕರನ್ನು ಪತ್ತೆ ಮಾಡಲು ನಾರ್ತ್ ಟೆಕ್ಸಾಸ್ ಟೋಲ್‌ವೇ ಪ್ರಾಧಿಕಾರ ಫೇಸ್ಬುಕ್‌ನಲ್ಲಿರುವ ತನ್ನ ವಾಲ್‌ನಲ್ಲಿ ವಿಡಿಯೋ ಹಾಕಿ, “ನಮಗೆ ನಿಮ್ಮ ಸಹಾಯ ಬೇಕಿದೆ! ನೀವೇನಾದರೂ ನಿಮ್ಮ ಮದುವೆಯ ಡ್ರೆಸ್ ಕಳೆದುಕೊಂಡಿದ್ದೀರಾ? ಇದು ನಿಮ್ಮ ಡ್ರೆಸ್ ಆಗಿದ್ದಲ್ಲಿ, ಅಥವಾ ಇದು ಯಾರದ್ದೆಂದು ಗೊತ್ತಿದ್ದಲ್ಲಿ, TalkToNTTA@ntta.org ಮೂಲಕ ನಮಗೆ ತಿಳಿಸಿ,” ಎಂದು ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿದೆ.
ಇಷ್ಟಾದ ಬಳಿಕವೂ ಇದುವರೆಗೂ ಯಾರೊಬ್ಬರೂ ಈ ಡ್ರೆಸ್ ತಮ್ಮದೆಂದು ಮುಂದೆ ಬಂದಿಲ್ಲ.
https://www.facebook.com/NorthTexasTollwayAuthority/posts/10159236413767412