ಕೋವಿಡ್ ಪರೀಕ್ಷೆ ಮಾಡಿಸಲು ತೆರಳಿದ ಟೆಕ್ಸಾಸ್‌ನ ಟ್ರಾವಿಸ್ ವಾರ್ನರ್ ಪರೀಕ್ಷೆಯ ವರದಿಗಿಂತ ಶುಲ್ಕವನ್ನು ನೋಡಿಯೇ ಶಾಕ್ ಆಗಿದ್ದಾರೆ.
ಇಲ್ಲಿನ ಲೆವಿಸ್‌ವಿಲ್ಲೆ ಎಂಬ ಊರಿನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟ ವಾರ್ನರ್ ಇದಕ್ಕಾಗಿ $54,384 (40 ಲಕ್ಷ ರೂ.ಗಳಿಗೂ ಹೆಚ್ಚು) ಶುಲ್ಕ ಪಾವತಿಸಬೇಕೆಂದು ಬಿಲ್ ಕಂಡು ದಂಗು ಬಡಿದಿದ್ದಾರೆ. ಪಿಸಿಆರ್ ಪರೀಕ್ಷೆ, ಆಂಟಿಜೆನ್ ಪರೀಕ್ಷೆ ಹಾಗೂ ಸೌಲಭ್ಯದ ಶುಲ್ಕವೆಂದು ಈ ಮಟ್ಟದಲ್ಲಿ ಬಿಲ್ ಜಡಿಯಲಾಗಿದೆ.
ವಾರ್ನರ್ ರವರ ಮಡದಿ ಸಹ ಅದೇ ದಿನ ಅದೇ ಪರೀಕ್ಷೆಗೆ ಒಳಪಟ್ಟಿದ್ದು, ಆಕೆಗೂ $2000 ಬಿಲ್ ಬಂದಿದೆ. ಆರೋಗ್ಯ ವಿಮೆಯ ಕಾರಣ ಬಿಲ್‌ಅನ್ನು ಚೌಕಾಶಿ ಮಾಡಿ $1000ಕ್ಕೆ ಇಳಿಸಲಾಗಿದೆ. ಮೊಲಿನಾ ಹೆಲ್ತ್‌ಕೇರ್ ಹೆಸರಿನ ವಿಮಾ ಸೇವಾದಾರ ಈ ಬಿಲ್ ಮೇಲೆ ಚೌಕಾಶಿ ಮಾಡಿ ತಾನು ವಾರ್ನರ್ ಪರವಾಗಿ $16,915.20 ಪಾವತಿ ಮಾಡಿದೆ.
ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ ಖ್ಯಾತ ಗಾಯಕಿ..!
ಬಿಲ್ಲಿಂಗ್ ದೋಷದಿಂದ ಈ ಸಮಸ್ಯೆ ಉದ್ಭವಿಸಿದ್ದು, ಮೊಲಿನಾ ಇದನ್ನು ಸರಿಪಡಿಸಿದೆ ಎಂದು ವಿಮೆ ಸೇವಾದಾರ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಅಮೆರಿಕದಲ್ಲಿ ಸಾಮಾನ್ಯವಾಗಿ ಕೋವಿಡ್-19 ಪರೀಕ್ಷೆಗೆ $8-15ರಷ್ಟು ಖರ್ಚಾಗುತ್ತದೆ. ಆದರೆ ಇಲ್ಲಿ ನೋಡಿದರೆ ಈ ಪರಿ ಎಡವಟ್ಟಾಗಿದೆ ಎಂದು ಮೈಕೇಲ್ ಮಿನಾ ಹೆಸರಿನ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.