ವಾಷಿಂಗ್ಟನ್: ಅಮೆರಿಕದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 40 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಮಿಜೋರಿಯಲ್ಲಿ ಅಪಘಾತ ಸಂಭವಿಸಿದೆ.
ಟೆಕ್ಸಾಸ್ ನ ಸ್ಯಾನ್ ಆಂಟೋನಿಯೊ ಹೊರವಲಯದಲ್ಲಿ ಲಾರಿಯೊಂದರಲ್ಲಿ ಕನಿಷ್ಠ 42 ಜನರು ವಲಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡ ಕನಿಷ್ಠ 16 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಾಹನವು ಸ್ಯಾನ್ ಆಂಟೋನಿಯೊದ ನೈಋತ್ಯ ಭಾಗದಲ್ಲಿ ರೈಲು ಹಳಿಗಳ ಪಕ್ಕದಲ್ಲಿ ಪತ್ತೆಯಾಗಿದೆ. ಸ್ಯಾನ್ ಆಂಟೋನಿಯೊ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಿಂದ ಕಾಣೆಯಾದ ವಾಹನದ ಚಾಲಕನನ್ನು ಹುಡುಕುತ್ತಿದ್ದಾರೆ. 40 ಮಂದಿ ಶವವಾಗಿ ಪತ್ತೆಯಾಗಿದ್ದು, ಘಟನೆಯ ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಸಲಾಗಿದೆ.
ಟೆಕ್ಸಾಸ್‌ನಲ್ಲಿರುವ ಸ್ಯಾನ್ ಆಂಟೋನಿಯೊ, US-ಮೆಕ್ಸಿಕನ್ ಗಡಿಯಿಂದ ಸುಮಾರು 250km(150 ಮೈಲುಗಳು) ದೂರದಲ್ಲಿದೆ. ಟೆಕ್ಸಾಸ್‌ನ ಗವರ್ನರ್ ಗ್ರೆಗ್ ಅಬಾಟ್, ದುರಂತಕ್ಕೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರನ್ನು ದೂಷಿಸಿದ್ದಾರೆ. ಅವರ ಮಾರಣಾಂತಿಕ ಮುಕ್ತ ಗಡಿ ನೀತಿಗಳ ಫಲಿತಾಂಶ ಇದು ಎಂದು ಟೀಕಿಸಿದ್ದಾರೆ.