ಕರ್ನಾಟಕ ಶಿಕ್ಷಕರ ಅರ್ಹತೆ ಪರೀಕ್ಷೆ (ಟಿಇಟಿ) ಯಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಕ್ಯೂಆರ್ ಕೋಡ್ ಹೊಂದಿರುವ ಗಣಕೀಕೃತ ಪ್ರಮಾಣ ಪತ್ರವನ್ನು ಈಗ ಬಿಡುಗಡೆ ಮಾಡಲಾಗಿದೆ.
ಅರ್ಹ ಅಭ್ಯರ್ಥಿಗಳು ಈ ಪ್ರಮಾಣ ಪತ್ರವನ್ನು ಇಲಾಖೆಯ ವೆಬ್ಸೈಟ್ https://schooleducation.karnataka.gov.in ಗೆ ಲಾಗಿನ್ ಆಗುವ ಮೂಲಕ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಡಿಸೆಂಬರ್ 23ರಂದು ಪ್ರಕಟವಾಗಿದ್ದು, ಇದೀಗ ಇಲಾಖೆಯ ವೆಬ್ ಸೈಟ್ ನಲ್ಲಿ ಕ್ಯೂಆರ್ ಕೋಡ್ ಹೊಂದಿರುವ ಗಣಕೀಕೃತ ಪ್ರಮಾಣ ಪತ್ರ ಲಭ್ಯವಿದೆ.