ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ ಅಪ್ಲಿಕೇಶನ್‌ನ ಸರ್ವರ್ ಕಳೆದ ವಾರ ಡೌನ್ ಆಗಿತ್ತು. ಈ ಕಾರಣದಿಂದಾಗಿ ಜಗತ್ತಿನಾದ್ಯಂತ ಇರುವ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾಲೀಕರಿಗೆ ತಮ್ಮ ಕಾರುಗಳೊಂದಿಗೆ ಕನೆಕ್ಟ್ ಆಗಲು ಕಷ್ಟವಾಗಿತ್ತು.
ಟೆಸ್ಲಾದ ಇವಿ ಕಾರುಗಳ ಮಾಲೀಕರು ಒಂದು ವೇಳೆ ಕೀಕಾರ್ಡ್‌ಗಳ ಬದಲಿಗೆ ತಮ್ಮ ಫೋನ್‌ಗಳನ್ನು ಬಳಸುತ್ತಿದ್ದಲ್ಲಿ ತಮ್ಮ ಕಾರುಗಳ ಬಾಗಿಲು ತೆರೆಯಲು ಹರಸಾಹಸ ಪಡುವಂತಾಗಿದೆ.
ಶುಕ್ರವಾರ ರಾತ್ರಿ ಟೆಸ್ಲಾ ಇವಿ ಕಾರುಗಳ ಮಾಲೀಕರಿಂದ ದೂರುಗಳು ಬಂದಿರುವ ವಿಚಾರವನ್ನು ಎಲೆಕ್ಟ್ರೆಕ್ ನಿಯತಕಾಲಿಕೆ ವರದಿ ಮಾಡಿದೆ. ಮೊದಲಿಗೆ ಈ ಸಮಸ್ಯೆ ಕೇವಲ ಉತ್ತರ ಅಮೆರಿದಲ್ಲಿ ಮಾತ್ರವೇ ಆಗಿದೆ ಎಂದು ಭಾವಿಸಲಾಗಿತ್ತು.
ಆದರೆ, ದೂರದ ದಕ್ಷಿಣ ಕೊರಿಯಾದ ಸೋಲ್‌ನಲ್ಲಿರುವ ಟೆಸ್ಲಾ ಇವಿ ಮಾಲೀಕರೊಬ್ಬರು ಇಂಥದ್ದೇ ದೂರು ಕೊಟ್ಟ ಬಳಿಕ ಜಾಗತಿಕವಾಗಿಯೇ ಸರ್ವರ್ ಡೌನ್ ಆಗಿದೆ ಎಂದು ಅರಿತ ಟೆಸ್ಲಾ ಸಿಇಓ, “ತಾವು ಈ ವಿಚಾರವನ್ನು ಪರಿಶೀಲಿಸುತ್ತಿರುವುದಾಗಿ,” ಪ್ರತಿಕ್ರಿಯಿಸಿದ್ದಾರೆ.
5000 ಮಹಿಳೆಯರೊಂದಿಗಿನ ಲೈಂಗಿಕ ಸಂಪರ್ಕದ ಮಾಹಿತಿಯನ್ನು ಸ್ಪ್ರೆಡ್ ಶೀಟ್‌ನಲ್ಲಿ ದಾಖಲಿಸಿಟ್ಟಿದ್ದ ಐಟಿ ದಿಗ್ಗಜ…!
ಟೆಸ್ಲಾ ನೀಡುವ ರಸ್ತೆ ಬದಿಯ ಸಲಹೆಗಳು ನಿಧಾನವಾದ ಕಾರಣ ತಮ್ಮ ಪ್ರಯಾಣದ ಪ್ಲಾನ್‌ಗಳು ತಡವಾಗುತ್ತಿವೆ ಎಂದು ಇನ್ನಷ್ಟು ಮಂದಿ ಟ್ವೀಟ್‌ಗಳ ಮೂಲಕ ಹೇಳಿಕೊಂಡಿದ್ದಾರೆ.
ಟೆಸ್ಲಾ ಇವಿ ತನ್ನ ಅಪ್ಲಿಕೇಶನ್‌ಗೆ ಹೊಸದೊಂದು ಅಪ್ಡೇಟ್ ಮಾಡಲು ಮುಂದಾದ ವೇಳೆ ಈ ಸಮಸ್ಯೆ ತಲೆದೋರಿದೆ. ಹೊಸದೊಂದು ಫೀಚರ್ ಸೇರ್ಪಡೆ ಮಾಡುವ ವೇಳೆ ಟೆಸ್ಲಾಗೆ ಈ ಅನುಭವವಾಗಿದೆ ಎಂದು ಎಲೆಕ್ಟ್ರೆಕ್ ತಿಳಿಸಿದೆ.
ಆಟೋಮೊಬೈಲ್ ಉತ್ಪಾದಕರು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಆಧರಿತವಾಗಿ ತಂತಮ್ಮ ವಾಹನಗಳ ನಿರ್ವಹಣೆ ಮಾಡುವ ಅವಕಾಶವನ್ನು ಮಾಲೀಕರಿಗೆ ನೀಡುತ್ತಿದ್ದಾರೆ. ಇದೇ ವೇಳೆ ಕ್ಲೌಡ್ ಸೇವೆಗಳ ಸರ್ವರ್‌ಗಳಲ್ಲಿ ಎಡವಟ್ಟಾದಲ್ಲಿ ವಾಹನಗಳು ಲಾಕ್ ಆಗಿ ಮಾಲೀಕರಿಗೆ ಭಾರೀ ಸಮಸ್ಯೆಗಳಾಗುವ ನಿದರ್ಶನಗಳೂ ಇತ್ತೀಚೆಗೆ ಅಲ್ಲಲ್ಲಿ ವರದಿಯಾಗುತ್ತಿವೆ.