ಭವಿಷ್ಯದ ಸಂಚಾರ ಶೈಲಿ ಎಂದೇ ಪ್ರಸಿದ್ಧಿ ಆಗಿರುವ ಎಲೆಕ್ಟ್ರಿಕ್ ಕಾರುಗಳ ಅತ್ಯಾಧುನಿಕ ಮಾಡೆಲ್‌ಗಳ ತಯಾರಿಕಾ ಸಂಸ್ಥೆ ’ಟೆಸ್ಲಾ’ ದಿಂದ ತನ್ನ ಸ್ವಯಂಚಾಲಿತ ಸಾಫ್ಟ್‌ವೇರ್ ಉನ್ನತೀಕರಿಸಲಾಗಿದೆ.
ವಿಶ್ವದ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾಗಿರುವ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಸ್ವಯಂಚಾಲಿತ ಕಾರಿನ ಸಾಫ್ಟ್‌ವೇರ್ ಹೆಸರು ’’ ಫುಲ್ ಸೆಲ್ಫ್ ಡ್ರೈವಿಂಗ್ ಬೀಟಾ (ಎಫ್‌ಎಸ್‌ಡಿ ಬೀಟಾ) ’’ ಎಂದು. 1.65 ಲಕ್ಷ ಹೊಸ ವಿಡಿಯೊಗಳನ್ನು ಈ ಸಾಫ್ಟ್‌ವೇರ್‌ಗೆ ಅಳವಡಿಸುವ ಮೂಲಕ ಜಗತ್ತಿನಲ್ಲಿನ ಶೇ. 13 ರಷ್ಟು ನಿಷ್ಕ್ರಿಯ ವಸ್ತುಗಳ ಬಗ್ಗೆ ಸಾಫ್ಟ್‌ವೇರ್‌ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ಅಂದರೆ ರಸ್ತೆಗಳಲ್ಲಿ ಸಂಚರಿಸುವಾಗ ತಾನೇ ತಾನಾಗಿ ಕೆಲವು ವಸ್ತುಗಳನ್ನು ಗುರುತಿಸಲು ಟೆಸ್ಲಾದ ಸಾಫ್ಟ್‌ವೇರ್‌ಗೆ ಇದು ನೆರವಾಗಲಿದೆ.
BIG BREAKING: 24 ಗಂಟೆಯಲ್ಲಿ ಮತ್ತೆ 9,119 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಒಂದೇ ದಿನದಲ್ಲಿ 396 ಜನ ಬಲಿ
ಸದ್ಯ ಟೆಸ್ಲಾದ ಎಫ್‌ಎಸ್‌ಡಿ ಬೀಟಾ ಸಾಫ್ಟ್‌ವೇರ್ ’10.5’ ಆವೃತ್ತಿಯದ್ದಾಗಿದೆ. ಇನ್ನೂ 15000 ಹೊಸ ವಿಡಿಯೊ ಕ್ಲಿಪ್‌ಗಳನ್ನು ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಲು ಕೂಡ ಕಂಪನಿ ಸಿದ್ಧತೆ ನಡೆಸಿದೆ. ಆ ಮೂಲಕ ಸ್ವಯಂಚಾಲಿತ ಕಾರುಗಳಲ್ಲಿ ಗರಿಷ್ಠ ಮಟ್ಟದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವುದು ನಮ್ಮ ಗುರಿ ಎಂದು ಕಂಪನಿ ಹೇಳಿಕೊಂಡಿದೆ.
ಸ್ವಯಂಚಾಲಿತ ಅಥವಾ ಫುಲ್ ಸೆಲ್ಫ್ ಡ್ರೈವಿಂಗ್ ವ್ಯವಸ್ಥೆಯಲ್ಲಿ ಕಾರಿನ ಚಾಲನಾ ವ್ಯವಸ್ಥೆಗೆ (ನ್ಯಾವಿಗೇಷನ್ ಸಿಸ್ಟಮ್) ಮೊದಲು ಪ್ರಯಾಣಿಕ ತಲುಪಬೇಕಿರುವ ನಿರ್ದಿಷ್ಟ ಸ್ಥಳದ ಮಾಹಿತಿಯನ್ನು ನೀಡುತ್ತಾರೆ. ಉಪಗ್ರಹ ಆಧರಿತ ನ್ಯಾವಿಗೇಷನ್ ಸಿಸ್ಟಂನಿಂದ ಕಾರೊಳಗಿನ ಎಂಜಿನ್ ನಿರ್ವಹಣೆ ಮಾಡಲಾಗುತ್ತದೆ. ಅದರಂತೆ, ನಿರ್ದಿಷ್ಟ ಸ್ಥಳದ ಮಾರ್ಗವನ್ನು ನಿಗದಿ ಮಾಡಿಕೊಂಡು ಕಾರಿನ ಸಾಫ್ಟ್‌ವೇರ್ ಸ್ಟೀರಿಂಗ್ ಕಂಟ್ರೋಲ್ ಮಾಡಲು ಶುರು ಮಾಡುತ್ತದೆ. ಸಂಚಾರಿ ನಿಯಮಗಳನ್ನು ಕೂಡ ಸಾಫ್ಟ್‌ವೇರ್‌ಗೆ ಅಪ್‌ಡೇಟ್ ಮಾಡಲಾಗಿರುವ ಕಾರಣ, ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಮಾಹಿತಿಯೂ ಕಾರಿಗೆ ಇದ್ದೇ ಇರುತ್ತದೆ.