ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಭಾರತದಂತೆಯೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನ ನಡೆಸಲಾಗ್ತಾ ಇದೆ. ಇದೇ ರೀತಿ ಸರಿ ಸುಮಾರು 75 ಲಕ್ಷ ಜನಸಂಖ್ಯೆ ಹೊಂದಿರುವ ಹಾಂಗ್ಕಾಂಗ್ನಲ್ಲೂ ಕೋವಿಡ್ ವಿರುದ್ಧ ಸರ್ಕಾರವು ಲಸಿಕೆ ಅಭಿಯಾನವನ್ನ ನಡೆಸುತ್ತಿದೆ.
ಆದರೆ ಇಲ್ಲಿನ ಜನತೆ ಲಸಿಕೆ ಪಡೆಯಲು ಉತ್ಸಾಹವನ್ನೇ ತೋರುತ್ತಿಲ್ಲ. ಲಸಿಕೆ ಅಭಿಯಾನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರೋದರ ಹಿನ್ನೆಲೆಯಲ್ಲಿ ಹಾಂಗ್ಕಾಂಗ್ ಜನತೆಗೆ ಭರ್ಜರಿ ಉಡುಗೊರೆಯ ಆಮಿಷವನ್ನ ನೀಡಲಾಗ್ತಿದೆ.
ಶೇವ್ ಮಾಡಿಸಿಕೊಳ್ಳಲು ಪ್ರಧಾನಿಗೆ 100 ರೂ. ಕಳುಹಿಸಿದ ಚಹಾ ವ್ಯಾಪಾರಿ
ಹಾಂಗ್ಕಾಂಗ್ನಲ್ಲಿ ಲಸಿಕೆ ಪಡೆಯುತ್ತಿರುವ ಜನತೆಗೆ ಟೆಸ್ಲಾ ಕಾರು, ಚಿನ್ನದ ಬಿಸ್ಕಟ್ಗಳನ್ನ ನೀಡೋದಾಗಿ ಆಫರ್ ನೀಡಿರುವ ಬೆನ್ನಲ್ಲೇ ಇದೀಗ ಸ್ಥಳೀಯ ಉದ್ಯಮಿಯೊಬ್ಬರು ಮತ್ತೊಂದು ಹೊಸ ಆಫರ್ನ್ನು ಲಸಿಕೆ ಸ್ವೀಕರಿಸುವವರಿಗಾಗಿ ನೀಡಿದ್ದಾರೆ.
ಪಂಪ್ ಹೊಡೆದು ಬೋರ್ವೆಲ್ ನೀರು ಕುಡಿದ ಗಜರಾಜ….!
ಹ್ಯಾಂಡರ್ಸನ್ ಲ್ಯಾಂಡ್ ಡೆವಲಪ್ಮೆಂಟ್ ಕಂಪನಿಯು ಕೋವಿಡ್ 19 ಲಸಿಕೆ ಪಡೆದವರಿಗೆ ಚಿನ್ನದ ಬಿಸ್ಕಟ್ಗಳನ್ನ ನೀಡೋದಾಗಿ ಹೇಳಿದೆ. ಇನ್ನು ಸನ್ ಹಾಂಗ್ ಕೆ ಪಾರ್ಪಟೀಸ್ ಎಂಬ ಕಂಪನಿಯು ಲಸಿಕೆ ಪಡೆದವರಿಗೆ ಐ ಫೋನ್ಗಳನ್ನ ಉಡುಗೊರೆಯಾಗಿ ನೀಡಿದೆ.
ಇನ್ನು ಗುಡ್ಮ್ಯಾನ್ ಗ್ರೂಪ್ ಕಂಪನಿಯು ಆಗಸ್ಟ್ 31ರೊಳಗಾಗಿ ಲಸಿಕೆ ಪಡೆಯುವವರಿಗೆ 1 ಮಿಲಿಯನ್ ಹಾಂಕ್ಕಾಂಗ್ ಡಾಲರ್ ಮೌಲ್ಯದ ಲಾಟರಿ ಟಿಕೆಟ್ ನೀಡಿದೆ. ಇದು ಮಾತ್ರವಲ್ಲದೇ ಇನ್ನೂ ಅನೇಕ ಕಂಪನಿಗಳು ಲಾಟರಿ ಟಿಕೆಟ್, ಶಾಪಿಂಗ್ ವೌಚರ್ಸ್, ಸಬ್ಸಿಡಿ ಹೀಗೆ ಅನೇಕ ಆಫರ್ಗಳನ್ನ ನೀಡುತ್ತಿದೆ.