ಭಾರತದಲ್ಲಿ ತನ್ನ ಇನ್ನೂ ಮೂರು ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಟೆಸ್ಲಾ ಅನುಮತಿ ಪಡೆದಿದೆ. ಈ ಮೂಲಕ ದೇಶದಲ್ಲಿ ಟೆಸ್ಲಾದ ಒಟ್ಟಾರೆ ಏಳು ಇವಿಗಳಿಗೆ ಅನುಮತಿ ಸಿಕ್ಕಂತಾಗಿದೆ.
ಆಗಸ್ಟ್‌ನಲ್ಲಿ ತನ್ನ ನಾಲ್ಕು ಕಾರುಗಳಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಅನುಮತಿ ಪಡೆದುಕೊಂಡಿದ್ದ ಟೆಸ್ಲಾ, ಇದೀಗ ಇನ್ನೂ ಮೂರು ಕಾರುಗಳನ್ನು ದೇಶದಲ್ಲಿ ಓಡಿಸಲು ಅನುಮತಿ ಪಡೆದಿದೆ.
ಟೆಸ್ಲಾದ ಯಾವೆಲ್ಲಾ ಕಾರುಗಳಿಗೆ ಅನುಮೋದನೆ ಸಿಕ್ಕಿದೆ ಎಂದು ಕಂಪನಿ ಬಹಿರಂಗಪಡಿಸಿಲ್ಲ. ಆದರೂ ಸಹ, ಕಂಪನಿಯ ಮಾಡೆಲ್ 3ಎಸ್ ಮತ್ತು ಮಾಡೆಲ್ ವೈಎಸ್‌ಗಳು ದೇಶದ ರಸ್ತೆಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸುತ್ತಿವೆ.
ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಮಾನ ಕಳ್ಳಸಾಗಣೆ ಜಾಲ ಪತ್ತೆ…?
ಅಮೆರಿಕದ ಇವಿ ದಿಗ್ಗಜ ಕಳೆದ ಕೆಲ ದಿನಗಳಿಂದ ಭಾರತದ ರಸ್ತೆಗಳ ಮೇಲೆ ತನ್ನ ಕಾರುಗಳನ್ನು ಓಡಿಸುತ್ತಿದ್ದು, ಭಾರತದಲ್ಲೇ ಉತ್ಪಾದನಾ ಘಟಕ ತೆರೆಯುವ ಸಂಬಂಧ ಇನ್ನೂ ಗಂಭೀರವಾದ ಹೆಜ್ಜೆಗಳನ್ನು ಇಟ್ಟಿಲ್ಲ.
ಭಾರತದಲ್ಲಿ ಟೆಸ್ಲಾ ಕಾರ್ಖಾನೆಯೊಂದನ್ನು ತೆರೆಯುವ ಸಾಧ್ಯತೆ ಇದೆ ಎಂಬ ಪರೋಕ್ಷ ಸುಳಿವೊಂದನ್ನು ವರ್ಷದಾರಂಭದಲ್ಲಿ ಮಸ್ಕ್ ನೀಡಿದ್ದರು. ಆಮದು ಮಾಡಿಕೊಳ್ಳುವ ವಾಹನಗಳ ಮೇಲಿನ ಸುಂಕವನ್ನು ಕನಿಷ್ಠ 40%ನಷ್ಟು ಇಳಿಸಿದರೆ, ದೇಶದಲ್ಲಿ ತನ್ನ ವಾಹನಗಳಿಗೆ ಹುಟ್ಟಬಹುದಾದ ಬೇಡಿಕೆಯ ಪ್ರಮಾಣವನ್ನು ಪರೀಕ್ಷಿಸಿ ಇಲ್ಲೇ ಉತ್ಪಾದನಾ ಕೆಲಸ ಆರಂಭಿಸುವ ಸಂಬಂಧ ನಿರ್ಣಯಕ್ಕೆ ಬರುವುದಾಗಿ ಮಸ್ಕ್ ತಿಳಿಸಿದ್ದರು.