ಪ್ಯಾರಿಸ್‌ನಲ್ಲಿ ಅಪಘಾತಕ್ಕೀಡಾದ ಟ್ಯಾಕ್ಸಿಯೊಂದರ ಚಾಲಕನ ವಕೀಲರೊಬ್ಬರು, ಟೆಸ್ಲಾ ಮಾಡೆಲ್ 3 ವಾಹನವು ತನ್ನಿಂತಾನೇ ಆಕ್ಸಿಲರೇಟ್ ಆಗಿದ್ದಲ್ಲದೇ ಬ್ರೇಕ್ ಗಳು ಸರಿಯಾಗಿ ಕೆಲಸ ಮಾಡದೇ ಇದ್ದ ಕಾರಣ ಹೀಗೆ ಆಗಿದೆ ಎಂದು ವಾದಿಸಿದ್ದಾರೆ.
ಅಪಘಾತದ ತನಿಖೆ ನಡೆಸುತ್ತಿರುವ ಪೊಲೀಸರಿಂದ ಕಾರಣವೇನೆಂದು ತಿಳಿಯಲು ಎದುರು ನೋಡುತ್ತಿರುವ ಪ್ಯಾರಿಸ್ ಟ್ಯಾಕ್ಸಿ ಕಂಪನಿ ಜಿ7 ಇದರ ಬೆನ್ನಿಗೇ ತನ್ನಲ್ಲಿರುವ ಟೆಸ್ಲಾ ಮಾಡೆಲ್ 3ನ 37 ಕಾರುಗಳ ಬಳಕೆಯನ್ನು ನಿಷಿದ್ಧಗೊಳಿಸಿದೆ. ಅಪಘಾತದಲ್ಲಿ ಒಬ್ಬ ಮೃತಪಟ್ಟು, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.
“ಕಾರಿನ ಚಾಲಕ ಪೊಲೀಸ್ ಅಧಿಕಾರಿಗಳಿಗೆ ವಿವರಿಸಿದ್ದು, ಕಾರು ತನ್ನಿಂತಾನೇ ವೇಗ ಪಡೆದುಕೊಂಡಿದ್ದಲ್ಲದೇ, ಅದೆಷ್ಟೇ ಪ್ರಯತ್ನಪಟ್ಟರೂ ಬ್ರೇಕ್‌ಗಳು ಕೆಲಸ ಮಾಡಲಿಲ್ಲ ಎಂದಿದ್ದಾರೆ,” ಎಂದು ವಕೀಲೆ ಸಾರಾ ಸಾಲ್ಡ್‌ಮಾನ್ ತಿಳಿಸಿದ್ದಾರೆ.
BIG NEWS: ಬೆಳಗಾವಿ ಹಿಂಸಾಚಾರ ಪ್ರಕರಣ; 27 ಪುಂಡರಿಗೆ ನ್ಯಾಯಾಂಗ ಬಂಧನ
ಫ್ರಾನ್ಸ್ ಸರ್ಕಾರಕ್ಕೆ ತನ್ನ ವಿವರಣೆ ಕೊಟ್ಟ ಟೆಸ್ಲಾ ಇಂಕ್, ಈ ಅಪಘಾತ ತಾಂತ್ರಿಕ ದೋಷದಿಂದ ಘಟಿಸಿದೆ ಎಂದು ತೋರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎಂದಿದೆ.
ಕಾರಿನ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಯುಎಸ್‌ಬಿ ಕೀಯನ್ನು ಅಪಘಾತ ಸ್ಥಳದಿಂದ ಪಡೆದುಕೊಂಡಿರುವ ಪೊಲೀಸರು, ಚಾಲಕನನ್ನು 48 ಗಂಟೆಗಳ ಕಾಲ ತನಿಖೆ ನಡೆಸಿದ್ದಾರೆ.
ಎಲೆಕ್ಟ್ರಿಕ್ ಮತ್ತು ಸ್ವಯಂ ಚಾಲಿತ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾದ ಮಾರುಕಟ್ಟೆ ಮೌಲ್ಯ ಸದ್ಯಕ್ಕೆ $1 ಟ್ರಿಲಿಯನ್‌ನಷ್ಟಿದೆ.