ವಿಶ್ವದಲ್ಲೇ ಅತ್ಯಂತ ಶ್ರೀಮಂತ ಎಂಬ ಪಟ್ಟವನ್ನು ಶೀಘ್ರವೇ ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಅವರು ತಮ್ಮದಾಗಿಸಿಕೊಳ್ಳಲಿದ್ದಾರೆ. ಯಾಕೆಂದರೆ ಅವರ ಆಸ್ತಿಯು 22.45 ಲಕ್ಷ ಕೋಟಿ ರೂ. ಆಗುತ್ತಿದೆ. ಇದರಲ್ಲಿರುವ ಮತ್ತೊಂದು ಸ್ವಾರಸ್ಯಕರ ಸಂಗತಿ ಎಂದರೆ, ಪಾಕಿಸ್ತಾನದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ – ಮಾರುಕಟ್ಟೆ ಮೌಲ್ಯ) ಸುಮಾರು 20.95 ಲಕ್ಷ ಕೋಟಿ ರೂ. ಮಾತ್ರ.
ಅಲ್ಲಿಗೆ ಪಾಕಿಸ್ತಾನ ಎಂಬ ಇಡೀ ದೇಶಕ್ಕಿಂತಲೂ ಮಸ್ಕ್ ಎಂಬ ಒಬ್ಬನೇ ವ್ಯಕ್ತಿ ಬಳಿಯಿರುವ ಆಸ್ತಿ ಮೌಲ್ಯ ಅತ್ಯಧಿಕ ! ಅಂದರೆ, 22 ಕೋಟಿ ಜನರಿಗಿಂತಲೂ ಒಬ್ಬ ವ್ಯಕ್ತಿ ಶ್ರೀಮಂತ ಎಂದಾಯಿತು. ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಇತ್ತೀಚೆಗೆ ಭಾರಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಮಸ್ಕ್ ಶ್ರೀಮಂತಿಕೆ ಗರಿಷ್ಠ ಮಟ್ಟ ತಲುಪುತ್ತಿದೆ.
ಇಂಗನ್ನು ಬಿಸಿ ಮಾಡಿ ಈ ಭಾಗಕ್ಕೆ ಹಚ್ಚಿದರೆ ಹೊಟ್ಟೆ ನೋವು ಮಾಯ
ಅಮೆರಿಕ ಎಲೆಕ್ಟ್ರಿಕ್ ಕಾರುಗಳ ತಯಾರಕ ಸಂಸ್ಥೆಯಾದ ‘ಟೆಸ್ಲಾ’ ಗೆ ಇತ್ತೀಚೆಗೆ 1 ಲಕ್ಷ ಕಾರುಗಳನ್ನು ತಯಾರಿಸಿ ನೀಡುವ ಬೃಹತ್ ಬೇಡಿಕೆಯನ್ನು ಬಾಡಿಗೆ ಕಾರು ಸೇವಾದಾರ ಕಂಪನಿ ‘ಹರಟ್ಜ್’ ಇಟ್ಟಿದೆ. ಇಂಥ ದೊಡ್ಡ ಖರೀದಿ ಒಪ್ಪಂದ ಅಂತಿಮಗೊಂಡ ಕೂಡಲೇ ಕಳೆದ ಸೋಮವಾರದಂದು ಅಮೆರಿಕದ ಷೇರು ವಹಿವಾಟು ಮಾರುಕಟ್ಟೆಯಲ್ಲಿ ಟೆಸ್ಲಾ ಷೇರುಗಳ ಮೌಲ್ಯ 13% ಏರಿಕೆ ಕಂಡಿತು. ಆ ಮೂಲಕ ಮಸ್ಕ್ ಆಸ್ತಿಯು ಒಂದೇ ದಿನದಲ್ಲಿ 2 ಲಕ್ಷ ಕೋಟಿ ರೂ. ಏರಿಕೆ ಕಂಡಿತು.
ದೇಶದಲ್ಲೇ ಅತಿ ಕಡಿಮೆ ದರಕ್ಕೆ ವಿದ್ಯುತ್ ಪೂರೈಸಲು ಮುಂದಾಗಿದೆ ಈ ಸರ್ಕಾರ..!
ಇದಾದ ಕೆಲವೇ ಗಂಟೆಗಳಲ್ಲಿ ಅಮೆರಿಕ ಮೂಲದ ಪತ್ರಕರ್ತ ಎಡ್ವರ್ಡ್ ಲೂಸ್ ಎಂಬಾತ ಪಾಕಿಸ್ತಾನದ ಜಿಡಿಪಿ ಜತೆಗೆ ಮಸ್ಕ್ ಆಸ್ತಿಯ ಮೌಲ್ಯದ ಹೋಲಿಕೆ ಮಾಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೊರೊನಾ ಸಂಕಷ್ಟ, ಚೀನಾದ ಸಾಲದ ಸುಳಿಯಲ್ಲಿ ಮುಳುಗಿರುವ ಪಾಕಿಸ್ತಾನದ ನೈಜ ಜಿಡಿಪಿ ಬಹುಶಃ ಘೋಷಣೆ ಆಗಿರುವುದಕ್ಕಿಂತ ಇನ್ನೂ ಕೆಳಮಟ್ಟಕ್ಕೆ ಕುಸಿದಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.