ಜೆರ್ಸಿ: ಆರ್ಆರ್ಆರ್ ಚಿತ್ರದ ನಾಟು ನಾಟು ಆಸ್ಕರ್ ಪ್ರಶಸ್ತಿ ಪಡೆದ ಮೇಲೆ ಜಗದ್ವಿಖ್ಯಾತಿ ಗಳಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ಸಾಗರೋತ್ತರ ಪ್ರೇಕ್ಷಕರನ್ನೂ ಆಕರ್ಷಿಸಿದೆ. ಪ್ರಪಂಚದಾದ್ಯಂತದ ಜನರು ಆಸ್ಕರ್-ವಿಜೇತ ಹಾಡಿಗೆ ಸ್ಟೆಪ್ ಹಾಕುತ್ತಿದ್ದಾರೆ.
ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಹಾಡಿನ ಬೀಟ್‌ನಲ್ಲಿ ಸಂಪೂರ್ಣ ಲೈಟ್ ಶೋ ನಡೆಸಲಾಗಿದೆ. ಮತ್ತು ಅದೂ ಟೆಸ್ಲಾ ಕಾರುಗಳನ್ನು ಬಳಸಿಕೊಂಡು ! ಅಮೆರಿಕದ ನ್ಯೂಜೆರ್ಸಿಯಲ್ಲಿ ಇದು ಕಂಡುಬಂದಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು RRR ಚಿತ್ರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. 1-ನಿಮಿಷದ ಕ್ಲಿಪ್‌ನಲ್ಲಿ, ಹಲವಾರು ಟೆಸ್ಲಾ ಕಾರುಗಳು ಪಾರ್ಕಿಂಗ್ ಸ್ಥಳದಲ್ಲಿ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಕಾರುಗಳ ಹೆಡ್‌ಲೈಟ್‌ಗಳು ನಾಟು ನಾಟುವಿನ ಬೀಟ್‌ಗಳೊಂದಿಗೆ ಸಿಂಕ್‌ನಲ್ಲಿ ಮಿಟುಕಿಸುತ್ತಿರುವುದನ್ನು ನೋಡಬಹುದು. ಬೆಳಕಿನ ಪ್ರದರ್ಶನವು ಸಂಪೂರ್ಣವಾಗಿ ಅದ್ಭುತವಾಗಿ ಕಾಣುತ್ತದೆ.
ವೀಡಿಯೋ ಇದುವರೆಗೆ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಟ್ವಿಟರ್ ಬಳಕೆದಾರರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಗಿದೆ.