ಲಂಡನ್‌ನ ಶಾಪಿಂಗ್ ಕಾಂಪ್ಲೆಕ್ಸ್ ಪಾರ್ಕಿಂಗ್ ಪ್ರದೇಶದ ಪ್ರವೇಶದ್ವಾರದಲ್ಲಿ ಟೆಸ್ಲಾ ಕಾರೊಂದರ ಬ್ಯಾಟರಿ ಖಾಲಿಯಾದ ಪರಿಣಾಮ 3 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ.
ಲಂಡನ್‌ನ ವೆಸ್ಟ್‌ಫೀಲ್ಡ್ ಶಾಪಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಬ್ಯಾಟರಿ ಚಾರ್ಜ್ ಮುಗಿದ ನಂತರ 3 ಗಂಟೆಗಳಿಗೂ ಹೆಚ್ಚು ಕಾಲ ಕಾರುಗಳು ಹೋಗಲಾಗದೆ ಒಂದರ ಹಿಂದೆ ಒಂದರಂತೆ ನಿಂತಿವೆ. ಇದರಿಂದ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಸಾಲ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅತ್ಯಾಚಾರದ ಆರೋಪ ಹೊರಿಸಿದ ಮಹಿಳೆ..!
ಹಲವಾರು ಗಂಟೆಗಳ ಕಾಲ ಮಾರ್ಗವನ್ನು ನಿರ್ಬಂಧಿಸಿದ ಬ್ಯಾಟರಿ ಖಾಲಿಯಾದ ಕಾರನ್ನು ತೆಗೆಯುವಲ್ಲಿ ವಿಳಂಬವಾಗಿದ್ದಕ್ಕೆ ಅಪಾರ ಟೀಕೆ ವ್ಯಕ್ತವಾಗಿದೆ. ಅಲ್ಲಿದ್ದ ಅನೇಕ ಜನರು ಈ ದೃಶ್ಯದ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಮನೆಯಲ್ಲೇ ಕುಳಿತು ಸ್ಮಾರ್ಟ್ಫೋನ್ ಮೂಲಕ ಗಳಿಸಿ ಸಾವಿರಾರು ರೂ.
ಹೆನ್ರಿ ಎಂಬ ಬಳಕೆದಾರರು ಟೆಸ್ಲಾ ಕಾರಿನ ಹಿಂದೆ ಯಾವುದೇ ಕಾರುಗಳು ಹಾದುಹೋಗಲಾಗದ ಸ್ಥಿತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಶಾಪಿಂಗ್ ಸೆಂಟರ್ ಬಗ್ಗೆ ಟೀಕಿಸಿದ್ದಾರೆ. ಕಾರಿನ ಚಾರ್ಜ್ ಖಾಲಿಯಾಗುವವರೆಗೂ ಡ್ರೈವರ್ ಕಾದಿದ್ದೇನಕ್ಕೆ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಆದ್ರೂ ಉಳಿದ ಕಾರು ಚಾಲಕರಂತೂ ಈ ಕೆಟ್ಟ ಘಟನೆಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ, ಕಾದು ಕಾದು ರೋಸಿ ಹೋಗಿತ್ತು ಎಂದೆಲ್ಲಾ ಹೇಳಿಕೊಂಡಿದ್ದಾರೆ.