2 ಭಯೋತ್ಪಾದನೆ ಪ್ರಕರಣಗಳಲ್ಲಿ ಭಯೋತ್ಪಾದಕ ಹಫೀಜ್ ಸಯೀದ್ ಗೆ ಪಾಕ್ ನ್ಯಾಯಾಲಯದಿಂದ 31 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ, ಲಷ್ಕರ್-ಎ-ತೊಯ್ಬಾದ ಸಹ-ಸಂಸ್ಥಾಪಕ ಮತ್ತು ಭಯೋತ್ಪಾದಕ ಸಂಘಟನೆ ಜಮಾತ್-ಉದ್-ದವಾಹ್ ಮುಖ್ಯಸ್ಥ ಹಫೀಜ್ ಸಯೀದ್ ಗೆ ಎರಡು ಪ್ರಕರಣಗಳಲ್ಲಿ 31 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆ ವಿಧಿಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸಯೀದ್ ಗೆ ದಂಡವನ್ನೂ ವಿಧಿಸಿದೆ. ಹಫೀಜ್ ಸಯೀದ್ ನನ್ನು ಈ ಹಿಂದೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಜೈಲಿಗೆ ಕಳುಹಿಸಿತ್ತು. 2020 ರಲ್ಲಿ ಅವನ ವಿರುದ್ಧದ ಹಲವಾರು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಒಂದರಲ್ಲಿ ಅವನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಹಲವಾರು ಭಯೋತ್ಪಾದಕ ದಾಳಿಗಳನ್ನು ಯೋಜಿಸಿ ಧನಸಹಾಯ ಮಾಡಿರುವ ಸಯೀದ್, ಮುಂಬೈನಲ್ಲಿ 2008 ರ ವಿಧ್ವಂಸಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆ. ದಾಳಿಯಲ್ಲಿ 166 ಜನ ಸಾವನ್ನಪ್ಪಿದರು. ನೂರಾರು ಜನರು ಗಾಯಗೊಂಡರು.
ವಿಶ್ವಸಂಸ್ಥೆಯಿಂದ ಭಯೋತ್ಪಾದಕನೆಂದು ಗುರುತಿಸಲಾಗಿದ್ದ ಸಯೀದ್ ತಲೆಗೆ ಯುನೈಟೆಡ್ ಸ್ಟೇಟ್ಸ್ ನಿಂದ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿತ್ತು. US ಹಫೀಜ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ.