ಪೇಶಾವರ : ಪಾಕಿಸ್ತಾನದ ವಾಯುವ್ಯ ಪ್ರದೇಶದ ಟೋಲ್ ಪ್ಲಾಜಾ ಬಳಿ ಬುಧವಾರ ನಡೆಸಿದ ಭಯೋತ್ಪಾದಕರ ದಾಳಿಗೆ ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೊಹತ್ ಜಿಲ್ಲೆಯ ಲಾಚಿ ಟೋಲ್ ಪ್ಲಾಜಾದಲ್ಲಿ ಅಪರಿಚಿತ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ. ಕೆಪಿಕೆ ಪ್ರಾಂತ್ಯದ ಕೊಹತ್ ಜಿಲ್ಲೆಯ ಲಾಚಿ ಟೋಲ್ ಪ್ಲಾಜಾದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.