ಸಣ್ಣ ಹಾವುಗಳನ್ನು ಕಂಡರೂ ಸಾಕು ಬಹುತೇಕರು ಭಯಬೀಳುತ್ತಾರೆ. ಉತ್ತಮ ತರಬೇತಿ ಪಡೆದ ಉರಗ ತಜ್ಞರು ಮಾತ್ರ ಸರೀಸೃಪಗಳನ್ನು ನಾಜೂಕಾಗಿ ಹಿಡಿಯಬಲ್ಲರು. ಆದರೆ, ಬಹುತೇಕ ಮಂದಿ ಹಾವನ್ನು ನೋಡಿದ್ರೆ ಸಾಕು ಭಯಬಿದ್ದು, ದೂರ ಓಡುತ್ತಾರೆ. ಒಂದುಕ್ಷಣ ಮೈ ಜುಮ್ಮೆನ್ನುತ್ತದೆ.
ಒಂದುವೇಳೆ ಹೆಬ್ಬಾವು ಅಥವಾ ಅನಕೊಂಡವನ್ನು ನೋಡಿದ್ರೆ ನೀವು ಅಲ್ಲಿಂದ ಖಂಡಿತಾ ಓಡಿಹೋಗಬಹುದು. ಅದೆಷ್ಟೋ ಬಾರಿ ಮೀನುಗಾರರ ಬಲೆಯಲ್ಲಿ ಮೀನಿನ ಬದಲು ಹಾವು ಸಿಲುಕಿಕೊಂಡ ಉದಾಹರಣೆಗಳಿವೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ಬೆಚ್ಚಿ ಬೀಳುತ್ತೀರಿ.
ನದಿಯಲ್ಲಿ ಮೀನಿಗಾಗಿ ಬಲೆ ಬೀಸಿದ ಮೀನುಗಾರನಿಗೆ ದೈತ್ಯ ಹಾವು ಸಿಕ್ಕಿದೆ. ಅದರ ಉಳಿದ ಭಾಗವು ನೀರಿನಲ್ಲಿದ್ದು, ನೋಡಲು ಭಯಾನಕವಾಗಿ ಕಂಡಿದೆ. ಇದು ಹಳೆ ವಿಡಿಯೋವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.
ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ನಿಂದ ಪ್ರತಿಕ್ರಿಯಿಸಿದ್ದಾರೆ. ಅನಕೊಂಡವನ್ನು ಹಿಡಿದ ಮೀನುಗಾರ ಯಾಕೆ ಸುಮ್ಮನಿದ್ದಾನೆ ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ಬಹುಶಃ ಆತ, ನನ್ನ ಮನೆಗೆ ಹೋಗೋಣ. ನಾನು ನಿನ್ನನ್ನು ನನ್ನ ಮಕ್ಕಳಿಗೆ ತೋರಿಸಲು ಬಯಸುತ್ತೇನೆ ಎಂದು ಯೋಚಿಸುತ್ತಿರಬೇಕು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.