ಫ್ಲಾರಿಡಾ: ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ್ದ ಯುವತಿಯೊಬ್ಬಳನ್ನು ನೀರಿನ ಅಳದಿಂದಲೇ ಗಮನಿಸಿದ ಮೊಸಳೆಯೊಂದು ಬೇಟೆಯಾಡಲು ನಿಧಾನವಾಗಿ ಮೇಲೆದ್ದು ಬಂದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಅಮೆರಿಕದ ಫ್ಲಾರಿಡಾದಲ್ಲಿ ಜೇಡ್ ಎಂಬ ಯುವತಿ ತನ್ನ ಸ್ನೇಹಿತರೊಂದಿಗೆ ಎವರ್‍ಗ್ಲೇಡ್ಸ್ ಪ್ರದೇಶಕ್ಕೆ ತೆರಳಿದ್ದಳು. ಅಲ್ಲಿ ಕೊಳಚೆ ನೀರನ್ನು ಹೊರಹಾಕುವ ದೊಡ್ಡ ಗಾತ್ರದ ಪೈಪ್‍ಗಳ ಎದುರು ಸಣ್ಣ ಕೆರೆಯೊಂದು ಸೃಷ್ಟಿಯಾಗಿ ಸ್ಥಳೀಯರಿಗೆ ಮೀನು ಹಿಡಿಯುವ ತಾಣವಾಗಿದೆ.
ಜೇಡ್ ಮೀನು ಹಿಡಿಯುವ ವಿಡಿಯೊ ಮಾಡುತ್ತಿದ್ದಾಗ, ಆಕೆಯ ಸ್ನೇಹಿತನೊಬ್ಬ ಪೈಪ್‍ಗಳ ಮೇಲೆ ನಿಂತು ಕುಣಿದಾಡುತ್ತಿದ್ದಾನೆ. ಆತ ಕೈಯಲ್ಲಿ ಫಿಶಿಂಗ್ ಲೈನ್ ಹಿಡಿದು ನೀರಿಗೆ ಎಸೆಯುವುದು, ತೆಗೆಯುವುದು ಮಾಡುತ್ತಿದ್ದಾನೆ. ಮೊಸಳೆ ಇರಬಹುದು, ಕಾಣಸಿಗಬಹುದು ಎಂಬ ಕುತೂಹಲ ಅವನಿಗೆ. ಆದರೆ, ಕೆರೆಯ ಆಳದಲ್ಲಿದ್ದ ಮೊಸಳೆಗೆ ಇವನೇ ಬೇಟೆ, ಇವನೇ ಆಹಾರ!
ಧ್ವಜಾರೋಹಣ ಕಂಬ ನೆಡುವಾಗ ವಿದ್ಯಾರ್ಥಿ ದುರ್ಮರಣ ಪ್ರಕರಣ; ಸರ್ಕಾರದಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ
ಸ್ವಲ್ಪ ಸಮಯದ ಬಳಿಕ ಜೇಡ್‍ಳ ವಿಡಿಯೊದಲ್ಲಿ ಪೈಪ್‍ಗಳ ಎದುರು ನೀರಿನಲ್ಲಿ ಮೊಸಳಗೆಯು ಮೇಲೆದ್ದು ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಜೇಡ್ ಹಿಂದಕ್ಕೆ ಸರಿದು, ಸ್ನೇಹಿತನಿಗೂ ಪೈಪ್‍ನಿಂದ ಹಿಂದೆ ಸರಿಯಲು ಗದರಿದ್ದಾಳೆ. ಟಿಕ್‍ಟಾಕ್, ಯೂಟ್ಯೂಬ್‍ನಲ್ಲಿ ಹಂಚಿಕೆಯಾಗಿರುವ ಈ ವಿಡಿಯೊ ಭಾರಿ ವೈರಲ್ ಆಗಿದೆ. ಮೊಸಳೆಯು ಎಗರಿ ಯುವಕನನ್ನು ಬೇಟೆಯಾಡಲು ಅರ್ಧ ಸೆಕೆಂಡ್ ಸಾಕಾಗಿತ್ತು ಎಂದು ಸಾಮಾಜಿಕ ಜಾಲತಾಣಿಗರು ಎಚ್ಚರಿಸಿದ್ದಾರೆ.
https://www.youtube.com/watch?v=Jtzu7xHlMqY&feature=emb_logo