ಲಂಡನ್: ಅಂಗಡಿಗೆ ನುಗ್ಗಿದ ದರೋಡೆಕೋರನೊಬ್ಬ ಅಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿರುವ ಭಯಾನಕ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್ ನ ಲಂಡನ್ ನಲ್ಲಿ ಈ ಘಟನೆ ನಡೆದಿದೆ.
ನವೆಂಬರ್ 9 ರ ಮಂಗಳವಾರ ರಾತ್ರಿ 11 ಗಂಟೆಯ ನಂತರ ಲಂಡನ್‌ನ ಕ್ಯಾನನ್ ಸ್ಟ್ರೀಟ್ ರಸ್ತೆಯಲ್ಲಿರುವ ಅಂಗಡಿಗೆ ನುಗ್ಗಿದ ದರೋಡೆಕೋರನೊಬ್ಬ ಸಿಬ್ಬಂದಿಗೆ ಬಂದೂಕು ಹಿಡಿದು, ಹೊಡೆಯಲು ಯತ್ನಿಸಿದ್ದಾನೆ.
ಗಾಬರಿಗೊಂಡ ಸಿಬ್ಬಂದಿ ಜೋರಾಗಿ ಕಿರುಚಿಕೊಂಡಿದ್ದು, ದರೋಡೆಕೋರನ ವಿರುದ್ಧ ಹೋರಾಟ ನಡೆಸಿದ್ದಾನೆ. ಅಂಗಡಿಯಲ್ಲಿದ್ದ ಚಾಕೊಲೇಟ್ ತುಂಬಿದ ಕೇಸ್ ಅನ್ನು ದರೋಡೆಕೋರನ ಮೇಲೆ ಬೀಳಿಸುವ ಮುಖಾಂತರ ಸಿಬ್ಬಂದಿ ಕಿರುಚುತ್ತಲೇ ಹೋರಾಡಿದ್ದಾನೆ.
ಕಪ್ಪು ಬಟ್ಟೆ ಹಾಗೂ ಮಾಸ್ಕ್ ಧರಿಸಿ ಅಂಗಡಿಗೆ ಎಂಟ್ರಿ ಕೊಟ್ಟ ಆಗಂತುಕ, ನಂತರ ತನ್ನ ಜಾಕೆಟ್‌ನಿಂದ ಬಂದೂಕನ್ನು ತೆಗೆದು ಅಂಗಡಿಯ ಸಿಬ್ಬಂದಿ ತಲೆಗೆ ಹೊಡೆಯಲು ಪ್ರಯತ್ನಿಸುತ್ತಾನೆ. ಶಸ್ತ್ರಸಜ್ಜಿತ ವ್ಯಕ್ತಿಯನ್ನು ಕಂಡು ಹೆದರಿದ ಸಿಬ್ಬಂದಿ ಜೋರಾಗಿ ಕಿರುಚಿಕೊಂಡಿದ್ದು, ಪ್ರತಿರೋಧ ತೋರಿದ್ದಾರೆ. ಈ ಭಯಾನಕ ವಿಡಿಯೋ ಅಂಗಡಿಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
https://www.youtube.com/watch?v=5FcBHntvkiA