ಮಾಸ್ಕೋದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 93 ಕ್ಕೆ ಏರಿಕೆಯಾಗಿದೆ. 145 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಇದರ ನಡುವೆ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಹನ್ನೊಂದು ಜನರನ್ನು ಶನಿವಾರ ಬಂಧಿಸಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿಗಳು ತಿಳಿಸಿವೆ.ಬಂಧಿತರಲ್ಲಿ ನಾಲ್ವರು ‘ಭಯೋತ್ಪಾದಕರು’ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಶ್ಚಿಮ ಮಾಸ್ಕೋದ ಸಂಗೀತ ಕಚೇರಿ ಸಭಾಂಗಣಕ್ಕೆ ನುಗ್ಗಿದ ದಾಳಿಕೋರರು ಜನಸಮೂಹದ ಮೇಲೆ ಗುಂಡು ಹಾರಿಸಿದ ನಂತರ ಅನೇಕ ಸಾವುನೋವುಗಳು ವರದಿಯಾಗಿವೆ.ಇಸ್ಲಾಮಿಕ್ ಸ್ಟೇಟ್ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಸಂಯೋಜಿತ ಚಾನೆಲ್ಗಳಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ರಷ್ಯಾದಲ್ಲಿ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದ್ದು, ದಾಳಿಯಲ್ಲಿ ಭಾಗಿಯಾಗಿರುವ ನಾಲ್ವರು ಉಗ್ರರು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಭೀಕರ ದಾಳಿಗೆ ರಷ್ಯಾ ಬೆಚ್ಚಿಬಿದ್ದಿದ್ದು, ಗುಂಡಿನ ದಾಳಿ ನಡೆಸಿದ ದೃಶ್ಯಗಳು ವೈರಲ್ ಆಗಿದೆ.