ವಿಶಾಖಪಟ್ಟಣಂ: ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಲ್ಲಿ ಭಾನುವಾರ ರಾತ್ರಿ ಭಾರಿ ಬೆಂಕಿಕಾಣಿಸಿಕೊಂಡಿದ್ದು, 40 ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು ಸುಟ್ಟುಹೋಗಿವೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಒಂದು ದೋಣಿಗೆ ತಗುಲಿದ ಬೆಂಕಿ ಹತ್ತಿರದಲ್ಲಿ ಲಂಗರು ಹಾಕಿದ್ದ ಇತರ ದೋಣಿಗಳಿಗೆ ವೇಗವಾಗಿ ಹರಡಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ದೋಣಿಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಎಲ್ಪಿಜಿ ಸಿಲಿಂಡರ್ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಈ ದೋಣಿಗಳ ಬೆಲೆ 60 ರಿಂದ 80 ಲಕ್ಷ ರೂ. ಎಂದು ಹೇಳಲಾಗಿದೆ.,
ಆಂಧ್ರಪ್ರದೇಶದ ಯಾಂತ್ರೀಕೃತ ದೋಣಿ ಮಾಲೀಕರ ಕಲ್ಯಾಣ ಸಂಘದ ಅಧ್ಯಕ್ಷ ಜಾನಕಿರಾಮ್ ಮಾತನಾಡಿ, “ಘಟನೆಯ ಸಮಯದಲ್ಲಿ, ಸುಮಾರು 500 ದೋಣಿಗಳು ಲಂಗರು ಹಾಕಿದ್ದವು ಮತ್ತು 100 ದೋಣಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿಗೆ ಆಹುತಿಯಾದ 100 ದೋಣಿಗಳಲ್ಲಿ 69 ದೋಣಿಯನ್ನು ಉಳಿಸಲು ನಮಗೆ ಸಾಧ್ಯವಾಯಿತು. ಒಟ್ಟು 40 ದೋಣಿಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಮೂಲಗಳು ಮಾಹಿತಿ ನೀಡಿದೆ.