ಲಡಾಖ್ : ಕಾರ್ಗಿಲ್ ಜಿಲ್ಲೆಯ ಅಂಗಡಿಯೊಂದರಲ್ಲಿ ಶುಕ್ರವಾರ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡ 11 ಜನರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಕಾರ್ಗಿಲ್ ಜಿಲ್ಲಾಧಿಕಾರಿ ಶ್ರೀಕಾಂತ್ ಸುಸೆ ಸುದ್ದಿಗಾರರಿಗೆ ತಿಳಿಸಿದ್ದಾರೆ.ಡ್ರಾಸ್ನ ಕಬಾಡಿ ನಲ್ಲಾ ಪ್ರದೇಶದ ಸ್ಕ್ರ್ಯಾಪ್ ಡೀಲರ್ ಅಂಗಡಿಯೊಳಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೂಸೆ ತಿಳಿಸಿದ್ದಾರೆ.ಕಾರ್ಗಿಲ್ ಡಿಸಿ ಮತ್ತು ಎಸ್ಎಸ್ಪಿ ಕಾರ್ಗಿಲ್ ಕುರ್ಬಟಾಂಗ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿಯ ಬಗ್ಗೆ ವಿಚಾರಿಸಿದರು.ಇದಲ್ಲದೆ, ಮೃತರ ಕುಟುಂಬಗಳಿಗೆ ರೆಡ್ ಕ್ರಾಸ್ ನಿಧಿಯಡಿ ಕೆಲವು ಮಧ್ಯಂತರ ಪರಿಹಾರವನ್ನು ಒದಗಿಸಲಾಗುತ್ತಿದೆ.