ನವದೆಹಲಿ: ಓರ್ವ ವ್ಯಕ್ತಿ ನಾಪತ್ತೆಯಾಗಿದ್ದು, 10 ಮಂದಿ ಭಾರತೀಯರು ಭೂಕಂಪ ಪೀಡಿತ ಟರ್ಕಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಪಶ್ಚಿಮ ಸಂಜಯ್ ವರ್ಮಾ ತಿಳಿಸಿದ್ದಾರೆ.
ಟರ್ಕಿಯ ಪರಿಸ್ಥಿತಿಯ ಕುರಿತು MEA ಬ್ರೀಫಿಂಗ್ ಸಮಯದಲ್ಲಿ ಅವರು ಮಾತನಾಡಿ, ನಾವು ಟರ್ಕಿಯ ಅದಾನದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿದ್ದೇವೆ. ಹತ್ತು ಭಾರತೀಯರು ಪೀಡಿತ ಪ್ರದೇಶಗಳ ದೂರದ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಅವರು ಸುರಕ್ಷಿತವಾಗಿದ್ದಾರೆ. ವ್ಯಾಪಾರ ಭೇಟಿಗೆ ಬಂದಿದ್ದ ಭಾರತೀಯ ಪ್ರಜೆಯೊಬ್ಬರು ಕಾಣೆಯಾಗಿದ್ದಾರೆ. ನಾವು ಅವರ ಕುಟುಂಬ ಮತ್ತು ಬೆಂಗಳೂರಿನಲ್ಲಿರುವ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.