ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ನಾಗಾಲ್ಯಾಂಡ್‌ನ ಎಲ್ಲಾ ವೈಭವದ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಜನವರಿ 11 ರಂದು ಅವರು ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅವರು ಲಾಂಗ್ವಾ ಎಂಬ ಹೆಸರಿನ ಹಳ್ಳಿಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದು ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ದೊಡ್ಡ ಹಳ್ಳಿಗಳಲ್ಲಿ ಒಂದಾಗಿದೆ. ಗ್ರಾಮವು ಭಾರತ-ಮ್ಯಾನ್ಮಾರ್ ಗಡಿಗೆ ಹತ್ತಿರದಲ್ಲಿದೆ ಮತ್ತು ಇದು ನೇರವಾಗಿ ಆಂಗ್ ಎಂದು ಕರೆಯಲ್ಪಡುವ ಮುಖ್ಯಸ್ಥರ ಮನೆಯ ಮೂಲಕ ಹಾದು ಹೋಗುತ್ತದೆ. ಇದರ ಬಗ್ಗೆ ಹಲವು ವಿಶೇಷತೆಗಳಿವೆ.
ಲಾಂಗ್ವಾ ಗ್ರಾಮದಲ್ಲಿ ಕೊನ್ಯಾಕ್ ನಾಗಾ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ ಮತ್ತು ಅಲ್ಲಿನ ನಿವಾಸಿಗಳಿಗೆ ದ್ವಿ ಪೌರತ್ವವನ್ನು ಹೊಂದಲು ಅನುಮತಿಸಲಾಗಿದೆ. ಇದರ ವಿಶೇಷತೆ ಎಂದರೆ ಒಂದೇ ಮನೆಯು ಎರಡು ದೇಶಗಳನ್ನು ಹಂಚಿಕೊಂಡಿವೆ. ಅಂದರೆ ಗಡಿಭಾಗದಲ್ಲಿರುವ ಮನೆಯ ಬೆಡ್ರೂಂ ಭಾರತಕ್ಕೆ ಸೇರಿದ್ದರೆ ಅಡುಗೆಮನೆ ಮ್ಯಾನ್ಮಾರ್ಗೆ ಸೇರಿದೆ !
ಬೆಡ್ರೂಮ್ಗೆ ಹೋಗಬೇಕು ಎಂದರೆ ಭಾರತಕ್ಕೆ ಹೋಗಬೇಕು, ಅಡುಗೆ ಮಾಡಬೇಕು ಎಂದರೆ ಮ್ಯಾನ್ಮಾರ್ಗೆ ಬರಬೇಕು ಎಂಬ ತಮಾಷೆಯ ಶೀರ್ಷಿಕೆ ಇದಕ್ಕೆ ಕೊಡಲಾಗಿದೆ. ನೆಟ್ಟಿಗರು ಅಚ್ಚರಿಯಲ್ಲಿ ಮುಳುಗಿದ್ದಾರೆ.
https://twitter.com/viraj_jalwal/status/1613473746261774336?ref_src=twsrc%5Etfw%7Ctwcamp%5Etweetembed%7Ctwterm%5E1613473746261774336%7Ctwgr%5Eb48adb6101fc744bf1364fb6b542c4e8f66627e4%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftemjen-imna-along-shares-video-of-nagaland-house-that-lies-both-in-india-and-myanmar-dont-miss-2320660-2023-01-12