ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ತೆಲುಗು ಮಾತನಾಡುವ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿನ ಚಿತ್ರ ಪ್ರದರ್ಶಕರನ್ನು ದಸರಾ ಮತ್ತು ಸಂಕ್ರಾಂತಿಯಂತಹ ಹಬ್ಬಗಳ ಸಮಯದಲ್ಲಿ ಡಬ್ಬಿಂಗ್ ಸಿನಿಮಾಗಳಿಗಿಂತ ತೆಲುಗು ಚಲನಚಿತ್ರಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ.
ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ಹಂಚಿಕೊಂಡಿರುವ ಮನವಿಯಲ್ಲಿ ಹಬ್ಬಗಳಂತಹ ಸಮಯದಲ್ಲಿ ಥಿಯೇಟರ್‌ಗಳಲ್ಲಿ ತೆಲುಗಿನಲ್ಲೇ ನಿರ್ಮಿಸಿದ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಸಂಸ್ಥೆ ಹೇಳಿದೆ. 2023 ಸಂಕ್ರಾಂತಿ ವಾರಾಂತ್ಯದಲ್ಲಿ ಎರಡು ದೊಡ್ಡ ತಮಿಳು ಚಿತ್ರಗಳಾದ ವರಿಸು ಮತ್ತು ತುನಿವು ಬಿಡುಗಡೆಯಾಗುತ್ತಿವೆ. ಇದೀಗ ಈ ಬಗ್ಗೆ ಆ ಸಿನಿಮಾ ಅಭಿಮಾನಿಗಳು ಈಗ ಚಿಂತಿತರಾಗಿದ್ದಾರೆ.
ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ಹಂಚಿಕೊಂಡ ಪತ್ರಿಕಾ ಪ್ರಕಟಣೆಯಲ್ಲಿ, “ತೆಲುಗು ಚಲನಚಿತ್ರಗಳ ನಿರ್ಮಾಣ ವೆಚ್ಚ ಹೆಚ್ಚಳವಾಗಿದ್ದು, ನಿರ್ಮಾಪಕರ ಕಲ್ಯಾಣ ಮತ್ತು ತೆಲುಗು ಚಲನಚಿತ್ರೋದ್ಯಮವನ್ನು ಉಳಿಸಲು, ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯು ತನ್ನ ತುರ್ತು ಸಭೆಯನ್ನು 08.12.2019 ರಂದು ಆಯೋಜಿಸಿದೆ. ಸಂಕ್ರಾಂತಿ ಮತ್ತು ದಸರಾ ಹಬ್ಬಗಳಲ್ಲಿ ತೆಲುಗು ನೇರ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು ಎಂದಿದೆ.
2019 ರಲ್ಲಿ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ತೆಗೆದುಕೊಂಡ ನಿರ್ಧಾರವನ್ನು ಮತ್ತು ಚಲನಚಿತ್ರ ನಿರ್ಮಾಪಕ ದಿಲ್ ರಾಜು ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಳೆಯ ಆದೇಶವನ್ನು ಮತ್ತೊಮ್ಮೆ ಒತ್ತಿ ಹೇಳುತ್ತಿದೆ.
ಜನವರಿಯಲ್ಲಿ ಬರುವ ಸಂಕ್ರಾಂತಿ-ಪೊಂಗಲ್ ವಾರಾಂತ್ಯವು ರಾಜ್ಯದಲ್ಲಿ ಮುಂದಿನ ಮೊದಲ ದೊಡ್ಡ ಹಬ್ಬವಾಗಿದೆ. ಕಿಕ್ಕಿರಿದ ವಾರಾಂತ್ಯದಲ್ಲಿ ಅಖಿಲ್ ಅಕ್ಕಿನೇನಿ ಅಭಿನಯದ ಏಜೆಂಟ್, ನಂದಮೂರಿ ಬಾಲಕೃಷ್ಣ ಅಭಿನಯದ ವೀರ ನರಸಿಂಹ ರೆಡ್ಡಿ ಮತ್ತು ಚಿರಂಜೀವಿ ಅಭಿನಯದ ವಾಲ್ಟೇರ್ ವೀರಯ್ಯ ಮೂರು ತೆಲುಗು ಚಿತ್ರಗಳು ಬಿಡುಗಡೆಯಾಗಲಿವೆ. ಆದಾಗ್ಯೂ ತೆಲುಗು ನಿರ್ಮಾಪಕರ ಆದೇಶದಿಂದ ತಮಿಳು ಸ್ಟಾರ್ ವಿಜಯ್ ಅವರ ವರಿಸು ಮತ್ತು ಅಜಿತ್ ಕುಮಾರ್ ಅವರ ತುಣಿವು ಚಿತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.