ಟಾಲಿವುಡ್ ನಟ ನಾಗಶೌರ್ಯ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಯುವತಿ ಅನುಷಾ ಶೆಟ್ಟಿ ಜೊತೆ ಇದೇ ತಿಂಗಳ 20ರಂದು ಮದುವೆ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು ನಾಗಶೌರ್ಯ ಶೇರ್ ಮಾಡಿದ್ದಾರೆ.
ಈ ಜೋಡಿಯದ್ದು ಪ್ರೇಮ ವಿವಾಹ ಎಂದು ಹೇಳಲಾಗುತ್ತಿದೆ. ಅನುಷಾ ಶೆಟ್ಟಿ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಯ ವಿವಾಹದ ಆಮಂತ್ರಣ ಪತ್ರಿಕೆ ಶೇರ್ ಆಗುತ್ತಲೇ ನೆಟ್ಟಿಗರ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಪೂರ್ವ ಗೋದಾವರಿ ಜಿಲ್ಲೆಯ ಏಲೂರಿನಲ್ಲಿ ಜನಿಸಿದ ನಾಗ ಶೌರ್ಯ ವಿಜಯವಾಡದಲ್ಲಿ ನೆಲೆಸಿದ್ದರು. ನಂತರ ಅವರ ಕುಟುಂಬ ಹೈದರಾಬಾದ್ಗೆ ಶಿಫ್ಟ್ ಆಗಿತ್ತು. 2011ರಲ್ಲಿ ‘ಕ್ರಿಕೆಟ್ ಗರ್ಲ್ಸ್ ಮತ್ತು ಬಿಯರ್’ ಚಿತ್ರದ ಮೂಲಕ ನಟನಾಗಿ ಪದಾರ್ಪಣೆ ಮಾಡಿದ ನಾಗಶೌರ್ಯ, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರವೀಣ್ ಸತ್ತಾರು ನಿರ್ದೇಶನದ ಚಂದಮಾಮ ಕಥೆಗಳು ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು.