ಹೈದರಾಬಾದ್: ಇಲ್ಲಿನ ಐಪಿಎಸ್ ಅಧಿಕಾರಿಯೊಬ್ಬರ ಅಧಿಕೃತ ವಾಹನಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಟಾಲಿವುಡ್ ನಟಿ ಮತ್ತು ಆಕೆಯ ಸ್ನೇಹಿತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಟಿ ಡಿಂಪಲ್ ಹಯಾತಿ ಮತ್ತು ಅವರ ಪುರುಷ ಸ್ನೇಹಿತ ಅವರು ಇಲ್ಲಿನ ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದ ಅಪಾರ್ಟ್ ಮೆಂಟ್ ನ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ಉಪ ಪೊಲೀಸ್ ಆಯುಕ್ತ(ಸಂಚಾರ–I) ರಾಹುಲ್ ಹೆಗ್ಡೆ ಅವರ ಪೊಲೀಸ್ ವಾಹನವನ್ನು ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಡಿಸಿಪಿ ಚಾಲಕ ದೂರು ನೀಡಿದ್ದಾರೆ.
ಹೆಡ್ ಕಾನ್‌ಸ್ಟೆಬಲ್ ಕಮ್ ಡ್ರೈವರ್ ಅವರು ಅಪಾರ್ಟ್‌ಮೆಂಟ್ ಸೆಲ್ಲಾರ್ ನಲ್ಲಿ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿ ಕಾರ್ ನಿಲ್ಲಿಸುತ್ತಿದ್ದರು. ನಟಿ ಮತ್ತು ಅವರ ಸ್ನೇಹಿತ ಆಗಾಗ್ಗೆ ಅವರ ದಾರಿಗೆ ಅಡ್ಡಿಪಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಮೇ 14 ರಂದು ಅವರು ತಮ್ಮ ವಾಹನವನ್ನು ಹಿಮ್ಮುಖವಾಗಿ ತೆಗೆದುಕೊಂಡು ಹೋಗುವಾಗ ಉದ್ದೇಶಪೂರ್ವಕವಾಗಿ ಕಾರ್ ಗೆ ಹಾನಿಗೊಳಿಸಿದ್ದಾರೆ ಎಂದು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರಿಗೆ ಹಾನಿ ಮಾಡಿದ ನಂತರ, ನಟಿ ಉದ್ದೇಶಪೂರ್ವಕವಾಗಿ ವಾಹನದ ಪಕ್ಕದಲ್ಲಿದ್ದ ಟ್ರಾಫಿಕ್ ಕೋನ್‌ಗಳನ್ನು ಒದ್ದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಘಟನೆಯ ನಂತರ ಚಾಲಕ ದೂರು ದಾಖಲಿಸಿದರು. ಅದರ ಆಧಾರದ ಮೇಲೆ ಪೊಲೀಸರು ನಟಿ ಮತ್ತು ಅವರ ಸ್ನೇಹಿತನ ವಿರುದ್ಧ ದೂರು ದಾಖಲಿಸಿದ್ದಾರೆ.
ತನಿಖಾಧಿಕಾರಿ(ಐಒ) ಸೋಮವಾರ ಡಿಂಪಲ್ ಹಯಾತಿ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆಯ ನಂತರ ಅವರಿಬ್ಬರಿಗೂ ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಡಿಂಪಲ್ ಹಯಾತಿ ತೆಲುಗು ಚಿತ್ರಗಳಾದ ‘ಕಿಲಾಡಿ’ ಮತ್ತು ‘ರಾಮ ಬಾಣಂ’ನಲ್ಲಿ ನಟಿಸಿದ್ದಾರೆ.