ಶಾಲಾ ರಜಾ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್, ಟಿವಿ ಎಂದು ಇಡೀ ದಿನ ಮಕ್ಕಳು ಇವುಗಳ ಮುಂದೆ ಕುಳಿತು ಬಿಡುತ್ತಾರೆ. ದೈಹಿಕ ಚಟುವಟಿಕೆಗಳು ಕೂಡ ಕಡಿಮೆಯಾಗುತ್ತದೆ.
ಮಕ್ಕಳಿಗೆ ಮೊಬೈಲ್, ಟಿವಿ, ಕಂಪ್ಯೂಟರ್ ಗಳನ್ನು ಎಷ್ಟು ಹೊತ್ತು ನೀಡಬೇಕು ಎಂಬುದನ್ನು ಮೊದಲು ನಿರ್ಧರಿಸಿ. ಆ ಸಮಯಕ್ಕೆ ಮಾತ್ರ ನೀಡಿ. ಇನ್ನು ಅವರು ಕಂಪ್ಯೂಟರ್/ ಮೊಬೈಲ್ ನೋಡುವಾಗ ನೀವು ಅವರ ಬಳಿಯೇ ಇರಿ. ಮಕ್ಕಳು ಬೇರೆ ಸೈಟ್ ಗಳತ್ತ ಆಕರ್ಷಿತರಾಗುವುದು ತಪ್ಪುತ್ತದೆ.
ಇನ್ನು ಅವರೊಂದಿಗೆ ನೀವು ಕೂಡ ಸ್ವಲ್ಪ ಹೊತ್ತು ಸಮಯ ಕಳೆಯಿರಿ. ಇದರಿಂದ ಅವರ ಮನಸ್ಸಿಗೂ ರಿಲ್ಯಾಕ್ಸ್ ಆಗುತ್ತದೆ. ಹೂವಿನ ಗಿಡ, ತರಕಾರಿ ಗಿಡಗಳನ್ನು ನೆಡುವ ಕೆಲಸ ಅವರಿಗೆ ಕೊಡಿ. ಇದರಿಂದ ಅವರಿಗೂ ಖುಷಿ ಸಿಗುತ್ತದೆ.
ಇನ್ನು ಮಕ್ಕಳಿಗೆ ಅವರವರ ಕೆಲಸ ಅವರೇ ಮಾಡಿಕೊಳ್ಳುವುದಕ್ಕೆ ಹೇಳಿ ಕೊಡಿ. ತಮ್ಮ ಬಟ್ಟೆ ಒಗೆಯುವುದು, ತಾವು ತಿಂದ ಪ್ಲೇಟ್ ತೊಳೆಯುವುದು ಇಂತಹ ಕೆಲಸವನ್ನು ಅವರಿಗೆ ಮಾಡುವುದಕ್ಕೆ ಕಲಿಸಿರಿ. ಇದರಿಂದ ಅವರಿಗೆ ಕಷ್ಟದ ಅರಿವು ಜತೆಗೆ ಬದುಕಿನ ಕುರಿತು ಆಲೋಚನೆಗಳು ಹೆಚ್ಚಾಗುತ್ತದೆ.