ನವದೆಹಲಿ: ಸುಲಿಗೆ ಮತ್ತು ಜೂಜಾಟದಂತಹ ಚಟುವಟಿಕೆಗಳಿಗೆ ಟೆಲಿಗ್ರಾಮ್ ಅನ್ನು ಬಳಸಲಾಗುತ್ತಿದೆ ಎಂಬ ಬೆಳವಣಿಗೆ ಬಗ್ಗೆ ಭಾರತ ಸರ್ಕಾರವು ಸಂದೇಶ ಕಳುಹಿಸುವ ಟೆಲಿಗ್ರಾಂ ಅಪ್ಲಿಕೇಶನ್ ಬಗ್ಗೆ ತನಿಖೆ ಮಾಡುತ್ತಿದೆ. ತನಿಖೆ ಆಧಾರದ ಮೇಲೆ ಅಪ್ಲಿಕೇಶನ್ ನಿಷೇಧಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಗೃಹ ವ್ಯವಹಾರಗಳ ಸಚಿವಾಲಯ(MHA) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(MeitY) ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ತನಿಖೆ ನಡೆಸುತ್ತಿದೆ.
ಟೆಲಿಗ್ರಾಮ್ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಆಗಸ್ಟ್ 24 ರಂದು ಪ್ಯಾರಿಸ್‌ನಲ್ಲಿ ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಅವರ ಅಪ್ಲಿಕೇಶನ್‌ನ ಮಾಡರೇಶನ್ ನೀತಿಗಳ ಮೇಲೆ ಪ್ಲಾಟ್‌ಫಾರ್ಮ್‌ನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿಷೇಧಿಸಲಾಗುತ್ತದೆಯೇ?
ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಟೆಲಿಗ್ರಾಮ್ ಭಾರತದ ಮಾಹಿತಿ ತಂತ್ರಜ್ಞಾನ(IT) ನಿಯಮಗಳನ್ನು ಅನುಸರಿಸುತ್ತದೆ.