
ಪ್ರೇಯಿಸಿ ಮೇಲಿನ ಸಂಶಯಕ್ಕೆ ವ್ಯಕ್ತಿಯೊಬ್ಬ ಟೆಲಿಕಾಂ ಕಚೇರಿಯನ್ನೇ ಧ್ವಂಸಗೊಳಿಸಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.
ತನ್ನ ಗೆಳತಿ ಪ್ರತಿದಿನ ಯಾರೋಂದಿಗೋ ಮಾತನಾಡುತ್ತಿರುತ್ತಾಳೆ ಎಂಬ ಅನುಮಾನಕ್ಕೆ ಅದನ್ನು ತಿಳಿದುಕೊಳ್ಳಲು ಟೆಲಿಕಾಂ ಕಚೇರಿಗೆ ವ್ಯಕ್ತಿ ಹೋಗಿದ್ದಾನೆ. ಹಾಗೇ ಹೋದವನು ಬರಿಗೈಲಿ ಹೋಗಿಲ್ಲ. ಕೈಯಲ್ಲಿ ಕೊಡಲಿ ಹಿಡಿದುಕೊಂಡು ಕಚ್ಚೇರಿಗೆ ನುಗ್ಗಿದ್ದಾನೆ.
ಕಚೇರಿಯಲ್ಲಿರುವವರಿಗೆ ಇದು ತನ್ನ ಪ್ರೇಯಸಿ ನಂಬರ್. ತನಗೆ ಆಕೆಗೆ ಬರುವ ಎಲ್ಲಾ ಕರೆಗಳ ವಿವರ ಬೇಕು ಎಂದು ಗದರಿಸಿದ್ದಾನೆ. ಆಕೆ ಯಾರ ಜೊತೆ ಮಾತನಾಡುತ್ತಾಳೆ ಎಂದು ತಿಳಿಯಬೇಕು ಎಂದಿಇದ್ದಾನೆ. ಆದರೆ ಟೆಲಿಕಾಂ ಸಿಬ್ಬಂದಿ ಯಾವುದೇ ವಿವರ ನೀದಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಇಡೀ ಕಚೇರಿಯನ್ನೇ ಧ್ವಂಸಗೊಳಿಸಿ ಹುಚ್ಚಾಟ ಮೆರೆದಿದ್ದಾನೆ.
ಸ್ಥಳದಲ್ಲಿದ್ದ ಜನರು ಆತನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಮಿಥುನ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.