
ನಿಮಗೆ ಕಾಡುತ್ತಿರುವ ಒತ್ತಡದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಟೆಲಿ ಮನಸ್ ನಿಮ್ಮ ಜೊತೆಗಿದೆ. 14416ಕ್ಕೆ ಕರೆ ಮಾಡಿ ಮಾತನಾಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ಒತ್ತಡದಿಂದ ವಿಮುಕ್ತರಾಗಿ.
ಜೀವನದಲ್ಲಿ ಒತ್ತಡ ಸಾಮಾನ್ಯ. ಕೆಲಸದ ಒತ್ತಡ, ಸಂಸಾರದ ಒತ್ತಡ ಹೀಗೆ ನೆಮ್ಮದಿ ಕೆಡೆಸಿಕೊಳ್ಳಲು ಸಾಕಷ್ಟು ವಿಚಾರಗಳು ಇವೆ. ಆದ್ರೆ, ಹೆಚ್ಚಿನ ಒತ್ತಡವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಇಂತಹ ಸಮಸ್ಯೆಗಳಿಗೆ ಸಾವು ಕೂಡ ಪರಿಹಾರವಲ್ಲ.
ಮಾನಸಿಕ ಆರೋಗ್ಯ ಸಮಸ್ಯೆ, ಪರೀಕ್ಷೆ ಒತ್ತಡ, ಕೌಟುಂಬಿಕ ಸಮಸ್ಯೆ, ಆರ್ಥಿಕ ಒತ್ತಡ ಸಂಬಂಧಿತ ಸಮಸ್ಯೆಗಳಿಗೆ ಟೆಲಿ ಮನಸ್ ಸಹಾಯವಾಣಿ 14416 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.
ಟೆಲಿ ಮನಸ್ ಆ್ಯಪ್ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಆಹಾರ ಪಥ, ನಿದ್ದೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳು ದೊರೆಯಲಿವೆ. ಮಾನಸಿಕ ಸ್ವಾಸ್ಥ್ಯದ ಬಗ್ಗೆ ವಿವರಗಳೂ ಲಭ್ಯವಾಗಲಿದೆ.
ಆರ್ಥಿಕ, ಕೌಟುಂಬಿಕ, ಪರೀಕ್ಷೆ ಸೇರಿ ವಿವಿಧ ರೀತಿಯ ಒತ್ತಡಗಳ ನಿರ್ವಹಣೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಮಾನಸಿಕ ಅನಾರೋಗ್ಯದ ಲಕ್ಷಣಗಳು ಹಾಗೂ ಅವುಗಳನ್ನು ಗುರುತಿಸುವ ಬಗೆಯ ಮಾಹಿತಿಯನ್ನೂ ಆ್ಯಪ್ ಒಳಗೊಂಡಿದೆ. ಸ್ವಯಂ ಮೌಲ್ಯಮಾಪನ, ಮಿದುಳಿಗೆ ಸವಾಲೊಡ್ಡುವ ಆಟಗಳೂ ಸೇರಿ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ವಿವಿಧ ಆಯ್ಕೆಗಳಿವೆ.


