ತೆಲಂಗಾಣದ ವರಂಗಲ್ ಜಿಲ್ಲೆಯ ಪಾಲಂಪೇಟ್‌ನಲ್ಲಿರುವ ರಾಮಪ್ಪ ದೇಗುಲವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸಂಸ್ಕೃತಿ ಇಲಾಖೆ ತಿಳಿಸಿದೆ.
ಇಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದಾದ ರಾಮಪ್ಪ ದೇವಸ್ಥಾನ 13ನೇ ಶತಮಾನದ್ದಾಗಿದ್ದು, ಇದರ ನಿರ್ಮಾತೃ ರಾಮಪ್ಪರ ಹೆಸರಿನಿಂದಲೇ ಕರೆಯಲ್ಪಡುತ್ತಿದೆ. 2019ರ ವರ್ಷದಲ್ಲಿ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲು ಕೇಂದ್ರ ಸರ್ಕಾರ ವಿಶ್ವ ಸಂಸ್ಥೆಗೆ ಪ್ರಸ್ತಾವನೆ ಇಟ್ಟಿತ್ತು.
ಸಮಯಪ್ರಜ್ಞೆಯಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ರೈಲು ಚಾಲಕ, ಸಿಬ್ಬಂದಿ
“ಎಕ್ಸಲೆಂಟ್ ! ಎಲ್ಲರಿಗೂ ಅಭಿನಂದನೆಗಳು, ಅದರಲ್ಲೂ ತೆಲಂಗಾಣದ ಜನತೆಗೆ. ದೈತ್ಯ ಕಾಕತೀಯರ ಶಿಲ್ಪಕಲಾ ಪಾರಂಗತ್ಯವನ್ನು ಸಾರುವ ರಾಮಪ್ಪ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅದರ ಅದ್ಭುತ ವಾಸ್ತುಶಿಲ್ಪವನ್ನು ಖುದ್ದು ಅನುಭವಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುವೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.