
ಹೈದರಾಬಾದ್: ತರಬೇತಿ ನಿರತ ಲಘು ವಿಮಾನವೊಂದು ಪತನಗೊಂಡು, ಓರ್ವ ಮೃತಪಟ್ಟಿರುವ ಘಟನೆ ತೆಲಂಗಾಣದ ಮೇದಕ್ ಬಳಿ ನಡೆದಿದೆ.
ಮೇದಕ್ ನ ತೂಪ್ರಾನ್ ಎಂಬಲ್ಲಿ ವಿಮಾನ ಪತನಗೊಂಡು ಹೊತ್ತಿ ಉರಿದಿದೆ. ತರಬೇತಿ ನಿರತ ಲಘು ವಿಮಾನ ಇದಾಗಿದ್ದು, ಇಬ್ಬರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ದುಂಡಿಗಲ್ ಏರ್ ಪೋರ್ಟ್ ಗೆ ಸೇರಿದ ಲಘು ವಿಮಾನವಾಗಿದ್ದು, ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.