ಹೈದರಾಬಾದ್: ಹೈದರಾಬಾದ್ ನಲ್ಲಿ ವೈಎಸ್ಆರ್ ಪುತ್ರಿ ಶರ್ಮಿಶಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. ಮಾಜಿ ಸಿಎಂ ವೈಎಸ್ಆರ್ ಪತ್ನಿ ವೈ.ಎಸ್. ವಿಜಯಮ್ಮ ಅವರಿಗೆ ಗೃಹಬಂಧನ ವಿಧಿಸಲಾಗಿದೆ.
ವೈಎಸ್ಆರ್ ಪತ್ನಿಗೆ ಹೈದರಾಬಾದ್ ಪೊಲೀಸರು ಗೃಹಬಂಧನದಲ್ಲಿಟ್ಟಿದ್ದಾರೆ. ಬಂಧಿತ ಪುತ್ರಿ ಶರ್ಮಿಳಾ ಭೇಟಿಗೆ ತೆರಳಲು ಯತ್ನಿಸಿದ್ದಕ್ಕೆ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಮುಖ್ಯಮಂತ್ರಿ ಕೆಸಿಆರ್ ಅವರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ವೇಳೆ ಶರ್ಮಿಳಾ ಅವರನ್ನು ಹೈದರಾಬಾದ್ ನ ಎಸ್ಆರ್ ನಗರ ಠಾಣೆ ಪೋಲೀಸರು ಬಂಧಿಸಿದ್ದರು.
ವೈ.ಎಸ್. ಶರ್ಮಿಳಾ ತಾಯಿ ವೈ.ಎಸ್. ವಿಜಯಮ್ಮ ಅವರನ್ನು ತೆಲಂಗಾಣ ಪೊಲೀಸರು ಗೃಹ ಬಂಧನದಲ್ಲಿಟ್ಟಿದ್ದಾರೆ. ವೈ.ಎಸ್. ವಿಜಯಮ್ಮ ಅವರು ಎಸ್.ಆರ್. ನಗರ ಪೊಲೀಸ್ ಠಾಣೆಗೆ ಹಾಜರಾಗಬೇಕಿತ್ತು, ಅಲ್ಲಿ ಅವರ ಮಗಳನ್ನು ಬಂಧಿಸಲಾಗಿತ್ತು.
ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ವಿರುದ್ಧ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದಿನ ದಿನ, ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ ಕುಳಿತಿದ್ದ ಕಾರನ್ನು ಹೈದರಾಬಾದ್ ಪೊಲೀಸರು ಎಳೆದೊಯ್ದರು. ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಅವರ ಸಹೋದರಿ ಶರ್ಮಿಳಾ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ಕ್ಯಾಂಪ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿತ್ತು.