ವಿಜಯಪುರ: ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ತೆಲಂಗಾಣ ವಿಧಾನಸಭೆಯ ಚುನಾವಣೆ ಜವಾಬ್ದಾರಿ ನೀಡಲಾಗಿದೆ.
ಎಂಟು ಕ್ಷೇತ್ರಗಳ ಜವಾಬ್ದಾರಿಯನ್ನು ನೀಡಿದ್ದು, ಹೈದರಾಬಾದ್ ನಲ್ಲಿ ನಾಳೆ ನಡೆಯುವ ತರಬೇತಿಗಾಗಿ ತೆಲಂಗಾಣಕ್ಕೆ ಪ್ರಯಾಣ ಬೆಳೆಸುವುದಾಗಿ ಯತ್ನಾಳ್ ತಿಳಿಸಿದ್ದಾರೆ.
ಶುಕ್ರವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓವೈಸಿ ಶಾಡೋ ಸರ್ಕಾರದಂತಿರುವ ಟಿ.ಆರ್.ಎಸ್. ಪಕ್ಷದ ಸರ್ಕಾರ ಅಲ್ಪಸಂಖ್ಯಾತರ ಹೆಸರಲ್ಲಿ ಓಲೈಕೆ ಮಾಡುತ್ತಿದೆ. ಒಂದು ಅರ್ಥದಲ್ಲಿ ಮುಸ್ಲಿಂ ಸರ್ಕಾರ ನಡೆಸುತ್ತಿದೆ. ತೆಲಂಗಾಣದಲ್ಲಿ ಹಿಂದೂಗಳ ಸ್ಥಿತಿ ದಯನೀಯವಾಗಿದೆ ಎಂದು ಯತ್ನಾಳ್ ಟೀಕಿಸಿದ್ದಾರೆ.
ಬಿಜೆಪಿ ಹಿಂದುತ್ವದ ಮೇಲೆ ನಿಂತಿದ್ದು, ಈ ಬಾರಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಸುತ್ತೇವೆ. ಅಲ್ಲಿನ ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದ್ದಾರೆ.