
ನವದೆಹಲಿ: ನಿರ್ಮಾಣ ಹಂತದಲ್ಲಿರುವ ತೆಲಂಗಾಣ ಸುರಂಗ ಕುಸಿತ ಘಟನೆಯಲ್ಲಿ ಸಿಲುಕಿರುವ ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಹದಿನಾರನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ SLBC ಸುರಂಗದಿಂದ ಕೊಳೆತ ಸ್ಥಿತಿಯಲ್ಲಿ ಒಬ್ಬ ಕಾರ್ಮಿಕನ ಮೃತದೇಹವನ್ನು ಹೊರತೆಗೆಯಲಾಯಿತು. ಯಂತ್ರದಲ್ಲಿ ಸಿಲುಕಿಕೊಂಡಿದ್ದ ಮೃತದೇಹವು ಒಂದು ಕೈ ಮಾತ್ರ ಗೋಚರಿಸುತ್ತಿತ್ತು ಎಂದು ರಕ್ಷಣಾ ತಂಡ ತಿಳಿಸಿದೆ.
ಮೃತರನ್ನು ಪಂಜಾಬ್‌ನ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. 10 ಮೀಟರ್ ವರೆಗೆ ಅಗೆಯಲಾಗಿದೆ. ನಿನ್ನೆ ರಾತ್ರಿ ಅವರ ಕೈ ಕಾಣಿಸಿಕೊಂಡಿದ್ದು, ಅವರ ಮೃತದೇಹವನ್ನು ಹೊರತರಲು ಸುಮಾರು 16 ಗಂಟೆಗಳ ಪ್ರಯತ್ನ ಬೇಕಾಯಿತು” ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ಶೀಘ್ರದಲ್ಲೇ ಮರಣೋತ್ತರ ಪರೀಕ್ಷೆಯ ನಂತರ ಕಾರ್ಮಿಕನ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಇದನ್ನು ನಾಗರ್ಕರ್ನೂಲ್ ಜನರಲ್ ಆಸ್ಪತ್ರೆಯ PME ಗೆ ಸ್ಥಳಾಂತರಿಸಲಾಗಿದೆ
ಕಾರ್ಮಿಕರನ್ನು ಹುಡುಕಲು ನಾಯಿಗಳ ನಿಯೋಜನೆ
ಇದಕ್ಕೂ ಮೊದಲು, ಕಾರ್ಮಿಕರನ್ನು ಹುಡುಕಲು ಕೇರಳ ಪೊಲೀಸರ ನಾಯಿಗಳನ್ನು ನಿಯೋಜಿಸಿದ್ದು, ರಕ್ಷಣಾ ಸಿಬ್ಬಂದಿ ನಾಯಿಗಳು ಸೂಚಿಸಿದ ಸ್ಥಳಗಳಲ್ಲಿ ಅಗೆಯುವಿಕೆಯನ್ನು ನಡೆಸಿದರು. ಕೇರಳ ಪೊಲೀಸರ ಬೆಲ್ಜಿಯಂ ಮಾಲಿನೋಯಿಸ್ ತಳಿಯ ನಾಯಿಗಳು 15 ಅಡಿ ಆಳದಿಂದಲೂ ವಾಸನೆಯನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ.
ನೀರು ಮತ್ತು ಕೆಸರು ಸೇರಿದಂತೆ ಸುರಂಗದೊಳಗಿನ ಸವಾಲಿನ ಪರಿಸ್ಥಿತಿಗಳು ಅಪಾಯವನ್ನುಂಟುಮಾಡುವುದರಿಂದ, ರಕ್ಷಣಾ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಲಂಗಾಣ ಸರ್ಕಾರ ಮಾರ್ಚ್ 11 ರಿಂದ ರಕ್ಷಣಾ ಕಾರ್ಯಾಚರಣೆಗೆ ರೋಬೋಟ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ.
#WATCH | Nagarkurnool, Telangana | SLBC Tunnel rescue operation | Rescue teams brought out one body from inside the SLBC Tunnel and shifted it to the PME to Nagarkurnool Hospital.
A body was removed from inside the SLBC Tunnel, which was found during the morning hours. The… pic.twitter.com/Mo8AbZ66H2
— ANI (@ANI) March 9, 2025